Home Crime ಹೆಬ್ರಿ: ಚರಂಡಿಯಲ್ಲಿ ಬಿದ್ದು ವ್ಯಕ್ತಿ ಸಾವು…!!

ಹೆಬ್ರಿ: ಚರಂಡಿಯಲ್ಲಿ ಬಿದ್ದು ವ್ಯಕ್ತಿ ಸಾವು…!!

ಹೆಬ್ರಿ: ಚರಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯ ನೆಹರೂ ನಗರದಲ್ಲಿ ನಡೆದಿದೆ.

ಮೃತರು ಚಾರ ಗ್ರಾಮದ ಆನಂದ ನಾಯ್ಕ (55). ಇವರು ಮದ್ಯಪಾನದ ಚಟ ಹೊಂದಿದ್ದರು. ಜೂನ್ 7 ರಂದು ಸಂಜೆ 4 ಗಂಟೆಯಿಂದ ಜೂನ್ 12 ರ ಬೆಳಿಗ್ಗೆ 9 ಗಂಟೆಯ ಅವಧಿಯಲ್ಲಿ ಮನೆಯಿಂದ ಹೆಬ್ರಿ ಕಡೆಗೆ ನಡೆದುಕೊಂಡು ಹೋಗುವಾಗ ನೆಹರೂ ನಗರ ಬಳಿ ಆಕಸ್ಮಿಕವಾಗಿ ಕಾಲು ಜಾರಿ ನೀರು ಹೋಗುವ ಚರಂಡಿಯಲ್ಲಿ ಬಿದ್ದು ಎದ್ದೇಳಲು ಆಗದೆ ಮೃತಪಟ್ಟಿದ್ದಾರೆ. ಕಳೆದ 2-3 ದಿನಗಳಿಂದ ವಿಪರೀತ ಮಳೆ ಸುರಿದ ಕಾರಣ ಚರಂಡಿ ನೀರಿನಲ್ಲಿ ತೇಲಿ ಹೋಗಿ ಚರಂಡಿ ಮೋರಿಯಲ್ಲಿ ಸಿಲುಕಿ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 26/2024 ಕಲಂ 174 CrPC (ಈಗ 194 BNSS) ರಂತೆ ಪ್ರಕರಣ ದಾಖಲಾಗಿದೆ.