Home Crime ಹಿರಿಯಡ್ಕ: ಯುವಕ ಆತ್ಮಹತ್ಯೆ…!!

ಹಿರಿಯಡ್ಕ: ಯುವಕ ಆತ್ಮಹತ್ಯೆ…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದ ಬಂಗ್ರಬೈಲು ನಿವಾಸಿ ಕೃಷ್ಣರಾಜ್ (33) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರು ತಾಯಿ ಗುಲಾಬಿ ಅವರೊಂದಿಗೆ ವಾಸವಾಗಿದ್ದು, ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಅ.21 ರಂದು ಬೆಳಿಗ್ಗೆ 7:30ಕ್ಕೆ ತಾಯಿ ಕೆಲಸಕ್ಕೆ ಹೋಗಿದ್ದು, ಅದಕ್ಕೂ ಮೊದಲೇ ಕೃಷ್ಣರಾಜ್ ಮನೆಯಿಂದ ಹೋಗಿದ್ದರು. ಸಂಜೆ 3:30ಕ್ಕೆ ತಾಯಿ ಮನೆಗೆ ಬಂದಾಗ ಮಗ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 37/2026 ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ.