Home Latest ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಂಕಿತ್ ಶೆಟ್ಟಿ ಆಯ್ಕೆ…!

ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಂಕಿತ್ ಶೆಟ್ಟಿ ಆಯ್ಕೆ…!

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಘಟಕ ಉಡುಪಿ ಪತ್ರಿಕಾ ಭವನ ಸಮಿತಿಯ 2025-28 ನೇ ಸಾಲಿನ ನೂತನ ಸಂಚಾಲಕರಾಗಿ ಚಾನೆಲ್ 9 ವಾಹಿನಿಯ ಅಂಕಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇಂದು ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

ಸಹ ಸಂಚಾಲಕರಾಗಿ ಉದಯವಾಣಿಯ ಗಣೇಶ್ ಕಲ್ಯಾಣಪುರ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನಮ್ಮ ಟಿವಿಯ ರಾಜೇಶ್ ಶೆಟ್ಟಿ, ಉದಯವಾಣಿಯ ರಾಜು ಖಾರ್ವಿ, ಪುನೀತ್ ಸಾಲ್ಯಾನ್, ಎಸ್ ಜಿ ನಾಯ್ಕ್, ರಿಪಬ್ಲಿಕ್ ಚಾನೆಲ್ ನ ಹರೀಶ್ ಪಿ, ವಿಜಯವಾಣಿಯ ಗೋಪಾಲಕೃಷ್ಣ ಪಾದೂರು, ಸ್ಪಂದನ ಟಿವಿಯ ನಾಗರಾಜ್ ರಾವ್, ಮಂಗಳೂರಿಯನ್ ಡಾಟ್ ಕಾಮ್ ನ ಮೈಕಲ್ ರೋಡ್ರಿಗಸ್, ಅಭಿಮತ ಟಿವಿಯ ನಿತೀಶ್ ಮಂಚಿ, ಹಾಗೂ ಪ್ರಜಾ ಟಿವಿಯ ಜಯಂತ್ ಎ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.