Home Kundapura News ಕುಂದಾಪುರ: ಕಾಂಕ್ರೆಟ್ ರಸ್ತೆಗೆ ಅಳವಡಿಸಿದ ಚಪ್ಪಡಿ ಸಂಪೂರ್ಣ ಕುಸಿತ : ದೂರಿಗೆ ಸ್ಪಂದಿಸದ ಪುರಸಭೆ ಅಧಿಕಾರಿಗಳು…!!

ಕುಂದಾಪುರ: ಕಾಂಕ್ರೆಟ್ ರಸ್ತೆಗೆ ಅಳವಡಿಸಿದ ಚಪ್ಪಡಿ ಸಂಪೂರ್ಣ ಕುಸಿತ : ದೂರಿಗೆ ಸ್ಪಂದಿಸದ ಪುರಸಭೆ ಅಧಿಕಾರಿಗಳು…!!

ಕುಂದಾಪುರ: ಪುರಸಭೆ ವ್ಯಾಪ್ತಿಯ ಹೃದಯ ಭಾಗದ ನಾನಾ ಸಾಹೇಬ್ ಮುಖ್ಯರಸ್ತೆಯ LIC ಆಫೀಸ್ ಬಳಿ ಡಿವೈಎಸ್ಪಿ ಪೊಲೀಸ್ ಠಾಣೆ ಸಮೀಪ ಕಾಂಕ್ರೆಟ್ ರಸ್ತೆಯ ಮೇಲೆ ಹರಿಯುವ ನೀರಿನ ಚರಂಡಿಗೆ ಅಳವಡಿಸಿದ ಕಾಂಕ್ರೀಟ್ ಚಪ್ಪಡಿ ಸಂಪೂರ್ಣ ಕುಸಿದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಹೆದರಿಕೆಯಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ

ಈ ಬಗ್ಗೆ ಕಾಂಕ್ರೀಟ್ ರಸ್ತೆಯ ಮೇಲಿರುವ ರಸ್ತೆಯ ಮಧ್ಯಭಾಗದಲ್ಲಿರುವ ಚರಂಡಿಗೆ ಅಳವಡಿಸಿದ ಚಪ್ಪಡಿಯನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಸಾರ್ವಜನಿಕರಲ್ಲಿ ಒಬ್ಬರಾದ ಗಣೇಶ್ ಎಂಬುವರು ಪುರಸಭೆಗೆ ದೂರು ನೀಡಿದರು ಪುರಸಭೆ ಅಧಿಕಾರಿಗಳು ನಮಗೇನು ಸಂಬಂಧವೇ ಇಲ್ಲ ಎಂಬಂತೆ ನಾವು ಮಾಡಿದ್ದೆ ಆಟ ಎನ್ನುವ ಮೂಲಕ ದೂರುದಾರರ ಮನವಿಗೆ ಸ್ಪಂದಿಸದೆ ಹುದ್ದಾಟತನ ಮಾಡುತ್ತಿದ್ದಾರೆ ಎಂದು ಗಣೇಶ್ ರವರು ಆರೋಪಿಸಿದ್ದಾರೆ.

ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಇತ್ತೀಚಿಗೆ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ದುಸ್ಥಿತಿಗೆ ಬರಲು ಕಾರಣರಾದವರನ್ನು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಹಾಗೆ ಚಪ್ಪಡಿ ದುರಸ್ತಿ ಮಾಡಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.