Home Crime ಕೋಟ: ಅಕ್ರಮ ಜಾನುವಾರು ಸಾಗಾಟ – ಬೊಲೆರೋ ಪಿಕಪ್ ಸಮೇತ 4 ಆರೋಪಿಗಳು ಪೊಲೀಸರ ವಶಕ್ಕೆ…!!

ಕೋಟ: ಅಕ್ರಮ ಜಾನುವಾರು ಸಾಗಾಟ – ಬೊಲೆರೋ ಪಿಕಪ್ ಸಮೇತ 4 ಆರೋಪಿಗಳು ಪೊಲೀಸರ ವಶಕ್ಕೆ…!!

ಕೋಟ, ಅ.14: ಅಕ್ರಮವಾಗಿ ಮಾಂಸಕ್ಕಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಬೊಲೆರೋ ಪಿಕಪ್ ವಾಹನವನ್ನು ಕೋಟ ಪೊಲೀಸರು ತೆಕ್ಕಟ್ಟೆ ಜಂಕ್ಷನ್ ಬಳಿ ವಶಪಡಿಸಿಕೊಂಡಿದ್ದು, 4 ಆರೋಪಿಗಳನ್ನು ಬಂಧಿಸಿದ್ದಾರೆ.

ದಿ.13/10/2026 ರಂದು ರಾತ್ರಿ 8:30ಕ್ಕೆ ಪಿಎಸ್ಐ ಪ್ರವೀಣ್ ಕುಮಾರ್ ಆರ್ ಅವರಿಗೆ ಕೊಟೇಶ್ವರ ಕಡೆಯಿಂದ ಉಡುಪಿ ಕಡೆಗೆ KA-40-B-8708 ನಂಬ್ರದ ಬೊಲೆರೋ ಪಿಕಪ್ ನಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಬಂದಿದೆ.

ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿ ಇಲಾಖಾ ಜೀಪ್ KA-20-G-6006 ಮತ್ತು ಖಾಸಗಿ ವಾಹನದಲ್ಲಿ ತೆಕ್ಕಟ್ಟೆ ಜಂಕ್ಷನ್ ಬಳಿ NH-66ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ರಾತ್ರಿ 9 ಗಂಟೆಗೆ KA-40-B-8708 ವಾಹನ 50 ಮೀಟರ್ ಹಿಂದೆ ನಿಲ್ಲಿಸಿರುವುದು ಕಂಡುಬಂದಿದೆ. ಪೊಲೀಸರನ್ನು ನೋಡಿ ವಾಹನದಲ್ಲಿದ್ದ 4 ಮಂದಿ ಓಡಿ ಹೋಗಲು ಯತ್ನಿಸಿದಾಗ ಸಿಬ್ಬಂದಿ ಅವರನ್ನು ಹಿಡಿದಿದ್ದಾರೆ.

ವಶಕ್ಕೆ ಪಡೆದವರನ್ನು 1) ಪುನೀತ್ (27) ಮೋಟಾಲ, ಚಿಕ್ಕಬಳ್ಳಾಪುರ,2) ಗಣೇಶ (26) ಬಾಗೇಪಲ್ಲಿ, ಕೋಲಾರ,
3) ಕೃಷ್ಣಪ್ಪ (40) ಚಿಕ್ಕಬಳ್ಳಾಪುರ,4) ಶ್ರೀನಿವಾಸ (56) ಚಿಕ್ಕಬಳ್ಳಾಪುರ ಎಂದು ಗುರುತಿಸಲಾಗಿದೆ.

ಪಿಕಪ್ ಪರಿಶೀಲಿಸಿದಾಗ 5 ದನಗಳು (ತಲಾ 5,000 ರೂ ಮೌಲ್ಯ) ಮತ್ತು 2 ತಿಂಗಳ 2 ಹೆಣ್ಣು ಕರುಗಳು (ತಲಾ 2,000 ರೂ) ಒಟ್ಟು 7 ಜಾನುವಾರುಗಳನ್ನು ಕುತ್ತಿಗೆಗೆ ನೈಲಾನ್ ಹಗ್ಗ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಆಹಾರ, ನೀರು ನೀಡದೆ ತುಂಬಿಸಿರುವುದು ಕಂಡುಬಂದಿದೆ. ವಾಹನ (ಮೌಲ್ಯ 2 ಲಕ್ಷ), 2 ಮೊಬೈಲ್ (ತಲಾ 2,000 ರೂ) ಮತ್ತು 1,850 ರೂ ನಗದು ಸೇರಿ ಒಟ್ಟು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕೋಟ ಠಾಣೆ ಅಪರಾಧ ಕ್ರಮಾಂಕ 155/2026 ಕಲಂ 303(3) ಜೊತೆಗೆ 3(5) BNS, ಗೋ ಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964ರ ಕಲಂ 8,9,11 ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ ಕಲಂ 11(1)(ಡಿ) ಅಡಿ ಪ್ರಕರಣ ದಾಖಲಿಸಲಾಗಿದೆ.