Home Latest ಬಜಪೆ ಮತ್ತು ಮಂಗಳೂರು ಗ್ರಾಮಾಂತರದಲ್ಲಿ ಮಾದಕ ವಸ್ತು ಸೇವನೆ – ಇಬ್ಬರ ವಿರುದ್ಧ ಪ್ರಕರಣ ದಾಖಲು…!!

ಬಜಪೆ ಮತ್ತು ಮಂಗಳೂರು ಗ್ರಾಮಾಂತರದಲ್ಲಿ ಮಾದಕ ವಸ್ತು ಸೇವನೆ – ಇಬ್ಬರ ವಿರುದ್ಧ ಪ್ರಕರಣ ದಾಖಲು…!!

ಮಂಗಳೂರು: ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇಲೆ ಬಜಪೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬಜಪೆ ಪ್ರಕರಣ:
ಅಕ್ಟೋಬರ್ 9ರಂದು ಸಂಜೆ 7 ಗಂಟೆಗೆ ಬಜಪೆ ಠಾಣೆಯ ಪಿಎಸ್ಐ ಅಶೋಕ್ ಅವರು ಸಿಬ್ಬಂದಿಗಳೊಂದಿಗೆ ಕಂದಾವರ ಗ್ರಾಮದ ಕೈಕಂಬ ಜಂಕ್ಷನ್ ಬಳಿ ರೌಂಡ್ಸ್‌ನಲ್ಲಿದ್ದಾಗ ರಸ್ತೆ ಬದಿಯಲ್ಲಿ ಯುವಕನೊಬ್ಬ ಅಮಲಿನಲ್ಲಿರುವುದು ಕಂಡುಬಂದಿದೆ.

ವಿಚಾರಣೆ ವೇಳೆ ಆತ ತನ್ನ ಹೆಸರು ಶಾಕೀರ್ (29), ತಂದೆ ಅಬ್ದುಲ್ ಸಿದ್ದಿಕ್, ವಾಸ ಪರಂಗಿಪೇಟೆ, ಬಂಟ್ವಾಳ ಎಂದು ತಿಳಿಸಿದ್ದಾನೆ. ಆತ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ Tetrahydrocannabinol (Marijuana) ಸೇವನೆ ದೃಢಪಟ್ಟಿದೆ ಎಂದು ವೈದ್ಯರು ದೃಢಪತ್ರ ನೀಡಿದ್ದಾರೆ.

ಮಂಗಳೂರು ಗ್ರಾಮಾಂತರ ಪ್ರಕರಣ:
ಇದೇ ದಿನ ಸಂಜೆ 6:45ಕ್ಕೆ ಮಂಗಳೂರು ತಾಲೂಕು ಪದವು ಗ್ರಾಮದ ಶಕ್ತಿನಗರ ಪ್ರೀತಿನಗರ ಬಳಿ ಪಿಎಸ್ಐ ಅರುಣ್ ಕುಮಾರ್ ಅವರು ರೌಂಡ್ಸ್‌ನಲ್ಲಿದ್ದಾಗ ಅನುಮಾನಾಸ್ಪದವಾಗಿ ಕಂಡುಬಂದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಆತ ಪುನಿತ್ ಅಲಿಯಾಸ್ ಶ್ರವಣ್ (24), ತಂದೆ ನಾಗೇಶ್ ಮಡಿವಾಳ, ಪ್ರೀತಿನಗರ, ಶಕ್ತಿನಗರ, ಮಂಗಳೂರು ಎಂದು ತಿಳಿದುಬಂದಿದೆ. ಎಜೆ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ.

ಇಬ್ಬರ ವಿರುದ್ಧ ಸಂಬಂಧಪಟ್ಟ ಠಾಣೆಗಳಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.