ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ರಾತ್ರಿ ನಡೆದಿದ್ದ ಮೀನುಗಾರನ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಗೋವಿಂದ ಎಂದು ಗುರುತಿಸಲಾಗಿದೆ.
ಕೊಲೆಯಾದವನು ಅಭಿಷೇಕ್ ಎಂದು ತಿಳಿಯಲಾಗಿದೆ.
ಬಂಧಿತ ಆರೋಪಿ ಗೋವಿಂದನ್ನು ಮಲ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಅನೀಲ್ ಕುಮಾರ್ ಮತ್ತು ಅವರ ತಂಡ ಕೂಡಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ದಿನಾಂಕ: 24.08.2026 ರಂದು ರಾತ್ರಿ ಬೋಟಿನಲ್ಲಿ ಗೋವಿಂದ ಹಾಗೂ ಅಭಿಷೇಕ್ರವರಿಗೆ ಗಲಾಟೆ ಮಾಡಿಕೊಂಡು ದಿನಾಂಕ 25-08-2026 ರಂದು ಬೆಳಿಗ್ಗೆ ಜಾವ ಗೋವಿಂದ ಎಂಬವನು ಅಭಿಷೇಕ್ ನನ್ನು ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಮಾಹಿತಿ ಪಡೆದ ತಕ್ಷಣ ಮಲ್ಪೆ ಪೊಲೀಸ್ ಠಾಣಾ ಅನೀಲ್ ಕುಮಾರ್ ಡಿ, ಉಪನಿರೀಕ್ಷಕರು (ಕಾ&ಸು) ರವರು ಸಿಬ್ಬಂದಿಗಳಾದ ಹೆಚ್ ಸಿ ಆದರ್ಶ ಮತ್ತು ಪಿಸಿ ಕುಬೇರ ರವರನ್ನು ಕರೆದುಕೊಂಡು ಆರೋಪಿ ಪತ್ತೆಯ ಬಗ್ಗೆ ಉಡುಪಿಗೆ ಹೋದಾಗ ಆರೋಪಿ ಗೋವಿಂದ ಹೈದರಾಬಾದ್ ಕಡೆಯೋ ಅಥವಾ ಮುಂಬೈ ಕಡೆ ಹೋಗಲು ರೈಲೆ ನಿಲ್ದಾಣಕ್ಕೆ ಹೋಗುವವನನ್ನು ತಕ್ಷಣ ವಶಕ್ಕೆ ಪಡೆಯಲಾಯಿತು. ಈತನು ಸುಮಾರು 15 ವರ್ಷಗಳಿಂದ ಮನೆಗೆ ಹೋಗದೇ ಮುಂಬೈ ಹೈದರಬಾದ್ ಹಾಗೂ ಇತರ ಕಡೆಗಳಲ್ಲಿ ಕೆಲಸ ಮಾಡಿ ಕೊಂಡಿರುವುದಾಗಿ ತಿಳಿದುಬಂದಿರುತ್ತದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 92/26 u/s. 103 BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಗೋವಿಂದನನ್ನು ವಶಕ್ಕೆ ಪಡೆಯಲಾಗಿರುತ್ತದೆ.






