Home Crime ವಿದೇಶದಲ್ಲಿ ಕುಳಿತು ಮಂಗಳೂರು ಯುವತಿಯರಿಗೆ ಗಾಳ : ಪತ್ನಿಯಿಂದಲೇ ಮಹಿಳಾ ಠಾಣೆಗೆ ದೂರು…!!

ವಿದೇಶದಲ್ಲಿ ಕುಳಿತು ಮಂಗಳೂರು ಯುವತಿಯರಿಗೆ ಗಾಳ : ಪತ್ನಿಯಿಂದಲೇ ಮಹಿಳಾ ಠಾಣೆಗೆ ದೂರು…!!

ಮಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿ ಮದುವೆಯಾಗಿ ನಂಬಿಸಿ ಹಣ ಪಡೆದು ವ್ಯಕ್ತಿಯೊಬ್ಬ ವಂಚನೆ ಮಾಡಿರುವ ಘಟನೆ ಮಾಡುವ ಮೊದಲೇ ವಿದೇಶದಲ್ಲಿಯೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಇನ್ನೋರ್ವನ ಕಥೆ ಹೊರ ಬಿದ್ದಿದೆ.

ಬಜಪೆ ನಿವಾಸಿ ಮನೀಶ್‌ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಠಾಣೆಗೆ ದೂರನ್ನು ನೀಡಿದ್ದಾರೆ.

ಮನೀಶ್‌ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ತನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾಗಿದ್ದ ಎಂದು ದೂರಲಾಗಿದೆ. ಮದುವೆಗೆ ಮೂರು ದಿನ ಇರುವಾಗ ಹಣ ಇಲ್ಲ ಎಂದು ಹೇಳಿ ಆತ್ಮಹತ್ಯೆ ನಾಟಕವಾಡಿದ್ದ ಈತ, ಇದರಿಂದ ನಾವೇ ಎಲ್ಲಾ ಖರ್ಚನ್ನು ಹಾಕಿ ಮದುವೆ ಮಾಡಿದ್ದೆವು. ಮದುವೆಯಾದ ನಂತರ ಎರಡು ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್‌ಗೆ ಕದಲಸ ಕೊಡಿಸಲು ಸಹಾಯ ಕೂಡಾ ಪ್ರೀತಿ ಮಾಡಿದ್ದರು. ಆದರೆ ದುಬೈಗೆ ಹೋದ ಈತ ಬಹರೇನ್‌ನಲ್ಲಿರುವ ಮಹಿಳೆ ಜೊತೆ ಪ್ರೇಮಪಾಠ ಶುರು ಮಾಡಿದ್ದಾನೆ. ಈತನ ವಿಚಾರ ತಿಳಿದು ಇತಿಹಾಸ ಕೆದಕಿದ ಪ್ರೀತಿಗೆ ನಿಜ ವಿಷಯ ತಿಳಿದು ಬಂದಿದೆ.

ಪ್ರೀತಿಯನ್ನು ಮದುವೆ ಮಾಡುವ ಮೊದಲೇ ಹಲವು ಯುವತಿಯರ ಜೊತೆ ಲವ್‌ ಅಫೇರ್‌ ಹೊಂದಿದ್ದ ಮನೀಶ್‌, ಅವರ ಬಳಿ ಕೂಡಾ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನು ಯುವತಿಯರೇ ಪ್ರೀತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಣ ವಾಪಸ್‌ ಕೇಳಿದಾಗ, ಎಲ್ಲ ಯುವತಿಯರ ಬಳಿ ತನಗೆ ಬ್ರೇನ್‌ ಟ್ಯೂಮರ್‌ ಇದೆ ಎಂದು ಹೇಳಿ ಹಣ ಕೊಡದೇ ಲವ್‌ ಬ್ರೇಕಪ್‌ ಮಾಡಿಕೊಂಡಿದ್ದ.

ಟಿಕ್‌ಟಾಕ್‌ ಯುವತಿಯರಿಗೆ ಗಾಳ ಹಾಕುವ ಮನೀಶ್‌ ನಡತೆಯಿಂದ ಬೇಸತ್ತ ಪತ್ನಿ ಪ್ರೀತಿ ಇಂತಹ ಗಂಡ ಬೇಡ ಈತನನ್ನು ನಂಬಿ ಮೋಸ ಹೋಗಬಾರದು ಎಂದು ಹೇಳಿದ್ದಾರೆ.