Home Latest ಮಣಿಪಾಲ: ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ…!!

ಮಣಿಪಾಲ: ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ…!!

ಉಡುಪಿ, ಅಕ್ಟೋಬರ್ 10: ಪ್ರಧಾನಿ ನರೇಂದ್ರ ಮೋದಿ ಅವರ ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ಮಣಿಪಾಲದ ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.

ಉಡುಪಿ ನಗರಸಭೆಯ ಆಶ್ರಯದಲ್ಲಿ, ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಈಶ್ವರ ನಗರ, ವಾರ್ಡ್ ಸಮಿತಿ ಈಶ್ವರ ನಗರ ಮತ್ತು ನಗರಸಭೆಯ ಸಮುದಾಯ ಸಂಘಟನೆಯ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಿಕಟಪೂರ್ವ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ ಅವರ ಸಂಯೋಜನೆಯಲ್ಲಿ ನಡೆದ ಅಭಿಯಾನದಲ್ಲಿ ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಪೂಜಾರಿ, ಸಂಘಟನೆಗಳ ಪ್ರಮುಖರಾದ ಹರೀಶ್ ಜಿ ಕಲ್ಮಾಡಿ, ಶ್ರೀನಾಥ್ ಮಣಿಪಾಲ, ಸುರೇಶ್ ಆಚಾರ್ಯ, ಡಾ. ಬಾಲಚಂದ್ರ, ಡಾ. ಸುರೇಶ ರಮಣಮಯ್ಯ, ಡಾ. ವಿನಾಯಕ್ ಶೆಣೈ, ಗಣಪತಿ ಕಾಮತ್, ರಾಜವರ್ಮ ಆರಿಗ, ಶಶಿಕಲಾ ರಾಜವರ್ಮ ಆರಿಗ, ಮಾಧವ ಶಾನಭೋಗ್, ಗಿರೀಶ್, ಕೃಷ್ಣ ನಾಯ್ಕ, ನಗರಸಭೆಯ ಆರೋಗ್ಯ ಅಧಿಕಾರಿ ಪ್ರಕಾಶ್ ಪ್ರಭು, ಸ್ವಚ್ಛತಾ ಸಂಯೋಜಕರಾದ ಸುರೇಶ್ ಶೆಟ್ಟಿ, ಪ್ರಶಾಂತ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.