Home Latest ಸ್ಥಳೀಯ ಆಹಾರ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ ರಿಲೈನ್ಸ್ ಸ್ಮಾರ್ಟ್ ಬಜಾರ್ : ಜನಾರ್ದನ್ ಕೊಡವೂರು…!!

ಸ್ಥಳೀಯ ಆಹಾರ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ ರಿಲೈನ್ಸ್ ಸ್ಮಾರ್ಟ್ ಬಜಾರ್ : ಜನಾರ್ದನ್ ಕೊಡವೂರು…!!

ಉಡುಪಿ: ಸ್ಥಳೀಯ ಆಹಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಿಲೈನ್ಸ್ ಸ್ಮಾರ್ಟ್ ಬಜಾರ್ ವತಿಯಿಂದ ಆಯೋಜಿಸಲಾದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಪತ್ರಕರ್ತ ಜನಾರ್ದನ್ ಕೊಡವೂರು ಅಭಿಪ್ರಾಯಪಟ್ಟರು.

ಗುರುವಾರ ಉಡುಪಿಯ ರಿಲೈನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ನಡೆದ ಆಟಿಡೊಂಜಿ ದಿನದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಗರ ಕೇಂದ್ರಿತ ವಾಣಿಜ್ಯ ಸಂಸ್ಥೆಯೊಂದು ತುಳುನಾಡಿನ ಸಾಂಪ್ರದಾಯಿಕ ಆಚರಣೆಗೆ ಆದ್ಯತೆ ನೀಡಿರುವುದು ಸಂತಸದ ವಿಷಯವಾಗಿದೆ ಎಂದರು.

ಒಂದೇ ಸೂರಿನಡಿ ಸ್ಥಳೀಯ 43 ಬಗೆಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳಿಗೆ ಅವಕಾಶ ಕಲ್ಪಿಸಿರುವುದು ವಿಶೇಷ. ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಸ್ಮರಣಿಕೆ ಹಾಗೂ ಬಹುಮಾನಗಳನ್ನು ನೀಡಿ, ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆ ಒದಗಿಸಿರುವುದು ಪ್ರಶಂಸನೀಯ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಂಜನಿ ವಸಂತ್ ಹಾಗು ಸಹನಾ ಬಲ್ಲಾಳ್ ಸಹಕರಿಸಿದರು. ರಿಲೈನ್ಸ್ ಸ್ಮಾರ್ಟ್ ಬಜಾರ್ ಮುಖ್ಯಸ್ಥ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ, ಅಗೋಸ್ಟ್ 12 ರಿಂದ 16ರವರೆಗೆ “ಫುಲ್ ಪೈಸಾ ವಸೂಲ್ ಸೇಲ್ ” ಪ್ರಾರಂಭವಾಗುವುದು ಎಂದರು. ಜ್ಯೋತಿ ಶೇಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.