Home Latest ರೈಲ್ವೆಯಲ್ಲಿ ಕಳ್ಳತನ ತಡೆಗೆ ಕ್ರಮ ಕೈಗೊಳ್ಳಿ : ಕೋಟ ಶ್ರೀನಿವಾಸ ಪೂಜಾರಿ…!!

ರೈಲ್ವೆಯಲ್ಲಿ ಕಳ್ಳತನ ತಡೆಗೆ ಕ್ರಮ ಕೈಗೊಳ್ಳಿ : ಕೋಟ ಶ್ರೀನಿವಾಸ ಪೂಜಾರಿ…!!

ಉಡುಪಿ: ಮಂಗಳೂರು-ಮುಂಬಯಿ ಪ್ರಯಾಣದ ಮತ್ಸ್ಯಗಂಧ, ಸಿಎಸ್ಟಿ ಮತ್ತು ಇನ್ನಿತರ ರೈಲುಗಳಲ್ಲಿ ಪ್ರಯಾಣಿಕರನ್ನು ವಂಚಿಸಿ ನಿರಂತರ ಕಳ್ಳತನ ನಡೆಯುತ್ತಿದೆ.

ರತ್ನಗಿರಿ ನಿಲ್ದಾಣದ ಬಳಿ ಅತಿ ಹೆಚ್ಚು ಲೂಟಿ ಮಾಡಲಾಗುತ್ತಿದೆ ಎಂಬ ದೂರು ಬರುತ್ತಿದೆ. ಕೇಂದ್ರ ರೈಲ್ವೆ ಸುರಕ್ಷತಾ ಇಲಾಖೆ ತಕ್ಷಣ ಕ್ರಮ ಜರುಗಿಸಿ ಪ್ರಯಾಣಿಕರಿಗೆ ಭದ್ರತೆ ಒದಗಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದರು.

ದೆಹಲಿಯಲ್ಲಿ ಕೇಂದ್ರ ರೈಲ್ವೆ ಬೋರ್ಡಿನ ಸುರಕ್ಷತಾ ವಿಭಾಗದ ಮಹಾನಿರ್ದೇಶಕಿ ಸೋನಿಯಾ ಶಮಾರ್ ಅವರನ್ನು ಶುಕ್ರವಾರ (ಅ.9) ಭೇಟಿಯಾಗಿ ಲಿಖಿತ ಮಾಹಿತಿ ಒದಗಿಸಿ, ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಅರ್ಪಿಸಿದರು.