Home Crime ಸುಳ್ಯ : ನೇಣು ಬಿಗಿದ ಯುವತಿ…!!

ಸುಳ್ಯ : ನೇಣು ಬಿಗಿದ ಯುವತಿ…!!

ಸುಳ್ಯ :  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಾವೂರು ಕಾಲೊನಿಯಲ್ಲಿ ಮುತ್ತು ಎಂಬವರ ಪುತ್ರಿ ಚಾಂದಿನಿ ಎಂಬವರು ನೇಣು ಬಿಗಿದ ಘಟನೆ ವರದಿಯಾಗಿದೆ.

ಮಧ್ಯಾಹ್ನದ ವೇಳೆಗೆ ಮನೆಯೊಳಗೆ ನೇಣು ಬಿಗಿದುಕೊಂಡಿದ್ದು, ಸಂಜೆ ತಾಯಿ ಮನೆಗೆ ಬಂದಾಗ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿರುವುದು ಗೊತ್ತಾಯಿತು.

ಬಳಿಕ ಕಿಟಕಿಯಿಂದ ನೋಡಿದಾಗ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆಯವರು ಬಂದು ಮಹಜರು ನಡೆಸಿದ್ದಾರೆ.