Home Crime ಮಂಗಳೂರು: ನಂತೂರಿನಲ್ಲಿ ಮಾದಕ ಸೇವನೆ – ಮೂವರು ಯುವಕರು ವಶಕ್ಕೆ…!!

ಮಂಗಳೂರು: ನಂತೂರಿನಲ್ಲಿ ಮಾದಕ ಸೇವನೆ – ಮೂವರು ಯುವಕರು ವಶಕ್ಕೆ…!!

ಮಂಗಳೂರು:‌ ನಗರದ ನಂತೂರು ಬಳಿ ಮಾದಕ ವಸ್ತು ಸೇವಿಸಿದ್ದ ಮೂವರು ಯುವಕರನ್ನು ಮಂಗಳೂರು ಪೂರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಪೂರ್ವ ಠಾಣೆಯ ಪಿಎಸ್ಐ ಮನೋಹರ ಪ್ರಸಾದ್ ಅವರು ಅಕ್ಟೋಬರ್ 7ರಂದು ಸಂಜೆ 7:30ಕ್ಕೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ನಂತೂರು ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮೂವರು ಯುವಕರು ಕಂಡುಬಂದಿದ್ದಾರೆ. ತೊದಲುತ್ತಾ ಮಾತನಾಡುತ್ತಿದ್ದ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಾದಕ ಸೇವನೆ ಮಾಡಿರುವುದು ಕಂಡುಬಂದಿದೆ.

ಪೊಲೀಸರು ಬಂಧಿಸಿದ ಆರೋಪಿಗಳು ರಾಕೇಶ್ (33), ತಂದೆ ಉಮೇಶ್, ರತಿ ಉಮೇಶ್ ನಿಲಯ, ಬೊಳೂರು, ಮಂಗಳೂರು,ಶಾಶ್ವತ್ ಎಸ್. (24), ತಂದೆ ಸೋಮಸುಂದರ, ಸುಲ್ತಾನ್ ಬತ್ತೇರಿ ರಸ್ತೆ, ಬೊಳೂರು,ಆದಿತ್ಯ ಜನಾರ್ಧನ ಕೊಟ್ಯಾನ್ (24), ತಂದೆ ಜನಾರ್ಧನ ಕೊಟ್ಯಾನ್, ಶ್ರೀ ಬ್ರಾಮರಿ ನಿಲಯ, ಮೂಡುಶೆಡ್ಡೆ, ಮಂಗಳೂರು ಎಂದು ಗುರುತಿಸಲಾಗಿದೆ.

ಮೂವರನ್ನು ಎ.ಜೆ. ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆ ನಡೆಸಿದಾಗ Amphetamine, Methamphetamine ಮತ್ತು Methylenedioxymethamphetamine (MDMA) ಪಾಸಿಟಿವ್ ಎಂದು ವರದಿ ಬಂದಿದೆ.

ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಕಾಯ್ದೆ (NDPS Act) ಅಡಿ ಪ್ರಕರಣ ದಾಖಲಿಸಲಾಗಿದೆ