ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲೆಯ ಗೌರವಾಧ್ಯಕ್ಷರಾದ ಅನ್ಸಾರ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ ರವರ ನೇತೃತ್ವದಲ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಗಳಿಸಿದ ಉಡುಪಿಯ ಶ್ರೀನಿತ್ ಎಸ್. ಸೇರಿಗಾರ್ ರವರಿಗೆ ಕೃಷ್ಣಾ ಮಠದ ಬಳಿ ಇರುವ ಮಥುರಾ ಕಂಫರ್ಟ್ ನಲ್ಲಿ ಮೇ 18ರ ಆದಿತ್ಯವಾರ ಸಹಾಯಧನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಸಯ್ಯದ್ ನಿಜಾಮುದ್ದಿನ್, ಸುಧೀರ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಪೂಜಾರಿ, ಅನುಷಾ ಆಚಾರ್ ಪಳ್ಳಿ, ಕಾರ್ಯದರ್ಶಿ ಸಂತೋಷ್ ಕುಲಾಲ್, ಸಂಘಟನಾ ಕಾರ್ಯದರ್ಶಿ ಗೋಪಾಲ್ ದೊರೆ, ವಿಶಾಲ ಜಿಲ್ಲಾ ಸಮಿತಿಯ ಸದಸ್ಯರಾದ ಪ್ರಕಾಶ್ ದೇವಾಡಿಗ, ಕರವೇ ಸದಸ್ಯರಾದ ಅಬ್ದುಲ್ ಖಾದರ್ ಶಿರ್ವ, ಸರೋಜಾ, ಚಂದ್ರಕಲಾ, ಲಲಿತಾ, ಉಷಾ, ಅಶೋಕ್ ರಾವ್ ಮೊದಲಾದವರು ಉಪಸ್ಥಿತರಿದ್ದರು.


