Home Crime ಕಾಪು: 5 ವರ್ಷದ ಮಗಳೊಂದಿಗೆ ತಂದೆ ನಾಪತ್ತೆ : ಕಾಪು ಠಾಣೆಯಲ್ಲಿ ಪ್ರಕರಣ ದಾಖಲು…!!

ಕಾಪು: 5 ವರ್ಷದ ಮಗಳೊಂದಿಗೆ ತಂದೆ ನಾಪತ್ತೆ : ಕಾಪು ಠಾಣೆಯಲ್ಲಿ ಪ್ರಕರಣ ದಾಖಲು…!!

ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಲ್ಯಾ ಉಳಿಯಾರಗೋಳಿ ಗ್ರಾಮದ ಭರತ್ ನಗರದ ನಿವಾಸಿ ದಿನೇಶ್ ಶೆಟ್ಟಿಗಾರ (45) ಹಾಗೂ ಅವರ 5 ವರ್ಷದ ಮಗಳು ನಾಪತ್ತೆಯಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನೇಶ್ ಶೆಟ್ಟಿಗಾರ ಅವರು ಸೆ.25ರಂದು ಸಂಜೆ ಸುಮಾರು 4 ಗಂಟೆಗೆ ಮಗಳ ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸುವುದಾಗಿ ಹೇಳಿ ಮಗುವನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು.

ಬಳಿಕ ತಂದೆ-ಮಗಳು ಮನೆಗೆ ವಾಪಸ್ ಬಂದಿಲ್ಲ.
ಪತ್ನಿ ಶಿಲ್ಪಾ ಅವರು ದಿನೇಶ್ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಕೊತ್ತಲಕಟ್ಟೆ, ಕೊಲ್ನಾಡ್, ಕಿರಿಮಂಜೇಶ್ವರ, ಬೈಂದೂರು ಹಾಗೂ ಉಪ್ಪುಂದದಲ್ಲಿರುವ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ತಂದೆ-ಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಕಾಣೆಯಾಗಿರುವ ದಿನೇಶ್ ಶೆಟ್ಟಿಗಾರ ಹಾಗೂ ಅವರ 5 ವರ್ಷದ ಮಗಳನ್ನು ಪತ್ತೆಹಚ್ಚಿಕೊಡುವಂತೆ ಶಿಲ್ಪಾ ಅವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.