Home Crime ಪಡುಬಿದ್ರಿ: ಹಣದ ವಿಚಾರಕ್ಕೆ ಕಾರು ಅಡ್ಡಗಟ್ಟಿ ಹಲ್ಲೆ – ವ್ಯಕ್ತಿಯನ್ನು ಕಾರಿನಲ್ಲಿ ಅಕ್ರಮ ಬಂಧನ….!!

ಪಡುಬಿದ್ರಿ: ಹಣದ ವಿಚಾರಕ್ಕೆ ಕಾರು ಅಡ್ಡಗಟ್ಟಿ ಹಲ್ಲೆ – ವ್ಯಕ್ತಿಯನ್ನು ಕಾರಿನಲ್ಲಿ ಅಕ್ರಮ ಬಂಧನ….!!

ಪಡುಬಿದ್ರಿ: ಹಣ ವಾಪಾಸು ವಿಚಾರಕ್ಕೆ ಸಂಬಂಧಿಸಿ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ, ವ್ಯಕ್ತಿಯನ್ನು ಕಾರಿನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಘಟನೆ ಎರ್ಮಾಳುವಿನಲ್ಲಿ ನಡೆದಿದೆ.

ಪಿರ್ಯಾದಿದಾರರು ನಾಗೇಶ್ (47), ಅಂಗಾಕಟ್ಟೆ, ಉಡುಪಿ ಇವರು

ನ.13 ರಂದು ನಾಗೇಶ್ ಅವರು ತನ್ನ ತಾಯಿ, ಹೆಂಡತಿ, ಮಕ್ಕಳು, ತಮ್ಮ ನಾಗೇಶ್, ಆತನ ಹೆಂಡತಿ ಮಕ್ಕಳೊಂದಿಗೆ ಮನೆಯಿಂದ ಮಂಗಳೂರಿನ ಕೊರಗಜ್ಜ ದೇವಸ್ಥಾನಕ್ಕೆ KA-51-MP-3007 ನೇ ನಂಬ್ರದ ಕಾರಿನಲ್ಲಿ ಹೋಗಿ ವಾಪಾಸು ಬರುತ್ತಿದ್ದರು.

ಮಧ್ಯಾಹ್ನ ಕಾಪು ತಾಲೂಕು ಬಡಾ ಗ್ರಾಮದ ತೆಂಕ ಗ್ರಾಮದ ಎರ್ಮಾಳುವಿನಲ್ಲಿ ಇರುವ ಅಶೋಕ್ ಎಂಬುವವರ ಹೋಟೆಲ್ ಎದುರು ಮಂಗಳೂರು-ಉಡುಪಿ ಏಕಮುಖ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ ಹೋಟೆಲ್‌ನಲ್ಲಿ ಊಟ ಮಾಡಿ ವಾಪಾಸು ಹೊರಗೆ ಬಂದು ಕಾರಿನ ಬಳಿಗೆ ಹೋದಾಗ ಆರೋಪಿ ಕಿರಣ್ ಕುಮಾರ್ ಹಾಗೂ ಇತರ 5 ಜನರು ಸಮಾನ ಉದ್ದೇಶ ಹೊಂದಿ ಅಕ್ರಮ ಕೂಟ ಸೇರಿಕೊಂಡು ಬಂದಿದ್ದಾರೆ.

ಆರೋಪಿಗಳು ಪಿರ್ಯಾದಿದಾರರ ತಮ್ಮನ ಕಾರಿಗೆ KA-20-MF-5871 ಹಾಗೂ KA-51-MC-8686 ನಂಬ್ರದ ಕಾರುಗಳನ್ನು ಮುಂದೆ ಹಾಗೂ ಹಿಂದೆ ಇಟ್ಟು, ಕಾರನ್ನು ಮುಂದಕ್ಕೆ ಹಾಗೂ ಹಿಂದಕ್ಕೆ ತೆಗೆಯದಂತೆ ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ನಂತರ ಪಿರ್ಯಾದಿದಾರರ ತಮ್ಮನನ್ನು ಹಿಡಿದು “ನಿನಗೆ ಕೊಟ್ಟ ಹಣ ವಾಪಾಸು ಕೊಡಲಿಕ್ಕೆ ಆಗುವುದಿಲ್ಲವೇ” ಎಂದು ಹೇಳಿ ಕೈಯಿಂದ ಕೆನ್ನೆಗೆ ಹೊಡೆದಿದ್ದಾರೆ. ಅಷ್ಟರಲ್ಲಿ ಪಿರ್ಯಾದಿದಾರರ ತಮ್ಮ ಆರೋಪಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ಆಗ ಆರೋಪಿಗಳು ಪಿರ್ಯಾದಿದಾರರನ್ನು ಕಾರಿನಲ್ಲಿ ಕೂರಿಸಿ ಅಕ್ರಮ ಬಂಧನದಲ್ಲಿ ಸುಮಾರು ಹೊತ್ತು ಇರಿಸಿದ್ದಾರೆ. ನಂತರ ಪಿರ್ಯಾದಿದಾರರ ಜೊತೆಯಲ್ಲಿದ್ದ ಮನೆಯವರು ಆರೋಪಿಗಳಲ್ಲಿ ಬೇಡಿಕೊಂಡಾಗ ಪಿರ್ಯಾದಿದಾರರನ್ನು ಕಾರಿನಿಂದ ಇಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ ಪೊಲೀಸರು ತನಿಖೆ ಕಾರ್ಯ ‌ಮುಂದುವರೆಸಿದ್ದಾರೆ.