ಉಡುಪಿ: ಕಂಚಿಗಾರಗುಳಿ ಶ್ರೀ ಕಾಮಾಕ್ಷಿ ದೇವಸ್ಥಾನ, ಇಂದ್ರಾಳಿ – ವಿಬುಧಪ್ರಿಯ ನಗರ ಇಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ
ರಾಜ್ಯಮಟ್ಟದ ತಂಡ ಭಜನಾ ಸ್ಪರ್ಧೆ ಹಾಡಿ ಭಜಿಸಿರೋ.. ತಾರೀಖು 11.10.2026, ರವಿವಾರ ದಿಂದ 19.10.2026 ಸೋಮವಾರ ದ ವರೆಗೆ ಜರುಗಲಿದ್ದು, 20.10.2026 ರಂದು ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಸ್ಪರ್ಧೆಯ ಪ್ರಾಥಮಿಕ ಸುತ್ತು: 11.10.2026 ರಿಂದ 17.10.2026 ರವರೆಗೆ ಹಾಗೂ ಅತ್ತ್ಯುತ್ತಮ 5 ತಂಡಗಳಿಗೆ ಅಂತಿಮ ಸುತ್ತು: 18.10.2026 ಮತ್ತು 19.10.2026 ರಂದು ಇರುತ್ತದೆ. ಪ್ರತಿದಿನ ಸಂಜೆ 4:30 ರಿಂದ 8:00 ಗಂಟೆವರೆಗೆ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯ ನಿಯಮಾವಳಿ:
1) ಪ್ರಾಥಮಿಕ ಸುತ್ತಿನಲ್ಲಿ ಪ್ರತಿ ತಂಡಕ್ಕೆ 45 ನಿಮಿಷಗಳ ಕಾಲಾವಕಾಶ
2) ಅಂತಿಮ ಸುತ್ತಿಗೆ ಐದು ಅತ್ಯುತ್ತಮ ತಂಡಗಳು ಅರ್ಹತೆ ಪಡೆಯುವವು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪ್ರತಿ ತಂಡಕ್ಕೆ ಒಂದು ಗಂಟೆಯ ಕಾಲಾವಕಾಶ.
3) ಬೇಕಾಗುವ ಎಲ್ಲಾ ಸಂಗೀತ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು.
4) ಪ್ರತಿ ತಂಡದಲ್ಲಿ ಹಿಮ್ಮೇಳ ವಾದಕರ ಸಹಿತ ಕನಿಷ್ಠ 5, ಗರಿಷ್ಠ 12 ಸದಸ್ಯರಿರಬಹುದು.
5) ಭಕ್ತಿ, ಭಾವ, ರಾಗ, ತಾಳ, ಲಯ, ಪಕ್ಕವಾದ್ಯ, ಹೊಂದಾಣಿಕೆ, ಸಮವಸ್ತ್ರ ಇವುಗಳ ಆಧಾರದಲ್ಲಿ ತೀರ್ಪು ನೀಡಲಾಗುವುದು.
6) ದಾಸರ ಪದಗಳಿಗೆ ಪ್ರಾಧಾನ್ಯತೆ
7) ಪ್ರತಿ ತಂಡದಲ್ಲಿ ಕನಿಷ್ಠ 3 ಸದಸ್ಯರು ಮುಖ್ಯ ಭೂಮಿಕೆಯಲ್ಲಿ ಹಾಡಬೇಕು
8) ಭಾಗವಹಿಸುವ ತಂಡಗಳು ಕನಿಷ್ಠ 30 ನಿಮಿಷ ಮುಂಚಿತವಾಗಿ ಉಪಸ್ಥಿತರಿರಬೇಕು.
9) ಕುಣಿತ ಭಜನೆಗೆ ಅವಕಾಶವಿಲ್ಲ
10) ಬಹುಮಾನಗಳು: ಪ್ರಥಮ: ರೂ. 9,999/-, ದ್ವಿತೀಯ: ರೂ. 7,777/-, ತೃತೀಯ: ರೂ. 5,555/-, ಸಮಾಧಾನಕರ: ರೂ. 2,222/- (2 ಬಹುಮಾನಗಳು)
11) ಭಾಗವಹಿಸುವ ಎಲ್ಲ ಸದಸ್ಯರಿಗೆ ಪ್ರಮಾಣ ಪತ್ರ ಮತ್ತು ತಂಡಕ್ಕೆ ಸ್ಮರಣಿಕೆ ನೀಡಲಾಗುವುದು
12) ಸ್ಪರ್ಧೆಗೆ ನೋಂದಾಯಿಸಲು ಕೊನೆಯ ದಿನ: 8.10.2026
ನೋಂದಾವಣೆಗೆ: 6363237824, 9980312692
13) ಸಂಘಟಕರ ತೀರ್ಮಾನವೇ ಅಂತಿಮ.



