ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿ.ಆರ್.ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಬಹುನಿರೀಕ್ಷಿತ “ಟಾಸ್” ಕನ್ನಡ ಹಾಗೂ ತುಳು ಸಿನಿಮಾ ರಾಜ್ಯಾದ್ಯಂತ ಎಲ್ಲಾ ಬಿಡುಗಡೆಯಾಗಿ ತುಂಬಾ ಸದ್ದು ಮಾಡುತ್ತಿದೆ.
ತುಳುನಾಡಿನ ಎಲ್ಲಾ ಚಿತ್ರ ಮಂದಿರಗಳಲ್ಲಿ ಶೋ ಗಳು ಹೌಸ್ ಫುಲ್ ಕಾಣುತ್ತಿವೆ. “ಟಾಸ್” ಚಿತ್ರವನ್ನು ನೋಡಿದ ಪ್ರೇಕ್ಷಕರು ಪುನಃ ಪುನಃ ನೋಡುತ್ತ ಇದ್ದಾರೆ.ಚಿತ್ರ ನೋಡಿ ಜನರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಟಾಸ್” ಚಿತ್ರ ತಂಡ ನಾಳೆ ಪುತ್ತೂರು ಚಿತ್ರಮಂದಿರಕ್ಕೆ ಭೇಟಿ ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸಿನಿಮಾ ಕುರಿತು:
“ಟಾಸ್” ಚಿತ್ರವನ್ನು ಅರ್ಜುನ್ ದೇವ್ (ಅರ್ಜುನ್ ಕಾಪಿಕಾಡ್) ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ತಂದೆ ಡಾ. ದೇವದಾಸ್ ಕಾಪಿಕಾಡ್ ಬರೆದಿದ್ದಾರೆ. ಇದು 2 ಗಂಟೆ 22 ನಿಮಿಷದ ಆ್ಯಕ್ಷನ್-ಡ್ರಾಮಾ.
ತಾಯಿ-ಮಗನ ಬಾಂಧವ್ಯ, ರಂಗಭೂಮಿ ಹಿನ್ನೆಲೆ, ಒಳಿತು-ಕೆಡುಕಿನ ನಡುವಿನ ಸಂಘರ್ಷ, ಪ್ರೀತಿ, ಕಾಮಿಡಿ, ಹೈ-ವೋಲ್ಟೇಜ್ ಸ್ಟಂಟ್ ಗಳು ಚಿತ್ರದಲ್ಲಿವೆ. ನಾಯಕಿ ಸುತೇಜ್ ಶೆಟ್ಟಿ, ಜೊತೆಗೆ ಕೃತಿ ಶೆಟ್ಟಿ, ದೇವ್ ದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಕಾಶ್ ತೂಮಿನಾಡ್, ಗರುಡಾ ರಾಮ್, ಬಾಲಾಜಿ ಮನೋಹರ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಮಣಿಕಾಂತ್ ಕದ್ರಿ ಸಂಗೀತ, ‘ಹಲೋ ಹಲೋ ನೀಲಾಂಬರಿ’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.






