Home Crime ಅಕ್ರಮ ಮರಳು ಸಾಗಾಟ : ಟಪ್ಪರ್ ಹಾಗೂ ಚಾಲಕ ವಶಕ್ಕೆ…!!

ಅಕ್ರಮ ಮರಳು ಸಾಗಾಟ : ಟಪ್ಪರ್ ಹಾಗೂ ಚಾಲಕ ವಶಕ್ಕೆ…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಟಿಪ್ಪರ್ ನಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಚಾಲಕ ಹಾಗೂ ಟಪ್ಪರ್ ನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ : ದಿನಾಂಕ 16/05/2025 ರಂದು ರಘು, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ಠಾಣಾ ಸರಹದ್ದಿನ ಕಾಂತಾವರ ಗ್ರಾಮದ ಬಾರಾಡಿ–ಪರಪ್ಪಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ರಾತ್ರಿ 11:30 ಗಂಟೆಗೆ ಚಿಲಿಂಬಿ ಕಡೆಯಿಂದ ಪರಪ್ಪಾಡಿ ಕಡೆಗೆ KA-52-9030 ನೇ ನಂಬ್ರದ ಟಿಪ್ಪರಿನಲ್ಲಿ ಆದರ ಚಾಲಕ, ಟಿಪ್ಪರ್ ನಂಬ್ರ KA-52-9030 ನೇಯದರ ಮಾಲಕ ಶೇಖ್ ಶಾಹಿದ್ ತಿಳಿಸಿದಂತೆ, ಟಿಪ್ಪರ್ ಚಾಲಕ ಮತ್ತು ಟಿಪ್ಪರ್ ನಂಬ್ರ KA-52-9030 ನೇಯದರ ಮಾಲಕ ಸಂಘಟಿತರಾಗಿ ಸಂಭಂದಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ಮಂಗಳೂರಿನ ಅಡ್ಡೂರಿನಿಂದ 2 ½ ಯುನಿಟ್ ಮರಳನ್ನು ಕಳವು ಮಾಡಿ ಟಿಪ್ಪರಿನಲ್ಲಿ ಸಾಗಾಟ ಮಾಡುತ್ತಿರುವ ಸಮಯ ಟಿಪ್ಪರ್ ಚಾಲಕನನ್ನು ಟಿಪ್ಪರ್ ಸಮೇತ ಮರಳನ್ನು ವಶಕ್ಕೆ ಪಡೆದಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2025 ಕಲಂ 303(2), 112(1) , R/w 3(5) ಭಾರತೀಯ ನ್ಯಾಯ ಸಂಹಿತೆ 2023 ಮತ್ತು U/s. 66 R/W 192(A) IMV ACT ಕಲಂ: 4(1-A), 21(4) Mines and Minerals Regulation Act 1957 ರಂತೆ ಪ್ರಕರಣ ದಾಖಲಾಗಿರುತ್ತದೆ.