ಉಡುಪಿ: ನಗರದ ಸಮೀಪ ಪಾದಚಾರಿ ಮಹಿಳೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆ ಗೌರಮ್ಮ ಎಂದು ತಿಳಿದು ಬಂದಿದೆ.
ಘಟನೆ ವಿವರ: ದಿನಾಂಕ 16/05/2025 ರಂದು 18:00 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಪುತ್ತೂರು ಎಲ್.ವಿ.ಟಿ ದೇವಸ್ಥಾನದ ಬಳಿ ಎಲ್.ವಿ.ಟಿ ಅಟೋ ನಿಲ್ದಾಣದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಕುಂದಾಪುರ-ಉಡುಪಿ ರಸ್ತೆಯಲ್ಲಿ ಆರೋಪಿ ಸುಹಾನ್ ಶೇಖ್ KA-01-HA-9259 ನೇ ಬೈಕಿನಲ್ಲಿ ಅಬ್ದುಲ್ ರೋಹನ್ ಎಂಬಾತನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಅದೇ ರಸ್ತೆಯನ್ನು ದಾಟುತ್ತಿದ್ದ ಗೌರಮ್ಮ (50) ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೌರಮ್ಮ ರವರು ರಸ್ತೆಗೆ ಬಿದ್ದು, ತಲೆಗೆ ಒಳಜಖಂ ಆಗಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದ ಗೌರಮ್ಮ ರಾತ್ರಿ 8:53 ಗಂಟೆಗೆ ಚಿಕಿತ್ಸೆಗೆ ಸ್ವಂದಿಸದೇ ಮೃತಪಟ್ಟಿರುತ್ತಾರೆ. ಆರೋಪಿ ಬೈಕ್ ಸವಾರ ಮತ್ತು ಸಹ ಸವಾರ ಅಬ್ದುಲ್ ರೋಹನ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2025 ಕಲಂ:281, 125(a), 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ