Home Latest ಶಾಲಾ ಮಕ್ಕಳ ಊಟದಲ್ಲಿ ಹಾಳಾದ ಮೊಟ್ಟೆ ಪತ್ತೆ…!!

ಶಾಲಾ ಮಕ್ಕಳ ಊಟದಲ್ಲಿ ಹಾಳಾದ ಮೊಟ್ಟೆ ಪತ್ತೆ…!!

ಉಡುಪಿ : ಉಡುಪಿಯಲ್ಲಿ ಹೋಲ್ ಸೇಲ್ ಹೆಸರಲ್ಲಿ ಕಳಪೆ ಮೊಟ್ಟೆಗಳನ್ನು ವಿತರಿಸುವ ಜಾಲವೊಂದು ಹಲವು ವರ್ಷಗಳಿಂದ ಆಕ್ಟಿವ್ ಆಗಿದೆ.

ನಿಸಾರ್ ಎಂಬ ವ್ಯಕ್ತಿ ಎಲ್ಲಾ ಶಾಲೆಗಳಿಗೆ ಮೊಟ್ಟೆ ವಿತರಿಸುವ ಟೆಂಡರ್ ಪಡೆದುಕೊಂಡಿದ್ದು ಕಳಪೆ ಮೊಟ್ಟೆಗಳನ್ನು ವಿತರಿಸುವುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಉಡುಪಿ ತಾಲೂಕಿನ ವಳಕಾಡು ಶಾಲೆಯ ಶಿಕ್ಷಕಿಯೊಬ್ಬರಿಗೆ ಮೊಟ್ಟೆ ಸರಿಯಾಗಿ ಬೇಯದಿರುವುದು ಗೊತ್ತಾಗಿತ್ತು. ಈಗ ನಗರದ ಬೋರ್ಡ್ ಹೈಸ್ಕೂಲ್ ನಲ್ಲಿ ಹಾಳಾದ ಮೊಟ್ಟೆ ಮಕ್ಕಳಿಗೆ ವಿತರಿಸಲಾಗಿದೆ.

ಸ್ವತಃ ಹೈಸ್ಕೂಲ್ ವಿದ್ಯಾರ್ಥಿಯೇ ಕೆಟ್ಟ ಅನುಭವ ಜೊತೆ ಹಂಚಿಕೊಂಡಿದ್ದಾನೆ.‌ ನಿಸಾರ್ ವಿತರಿಸುವ ಮೊಟ್ಟೆಯನ್ನೇ ಮಕ್ಕಳಿಗೆ ಬೇಯಿಸಿ ನೀಡಲಾಗುತ್ತಿದೆ. ಬೇಯಿಸಿದ ಮೊಟ್ಟೆಯಲ್ಲಿ ಕೆಟ್ಟ ವಾಸನೆ, ರಬ್ಬರ್ ರೀತಿಯ ಅನುಭವ ಹೀಗೆ ಮೊಟ್ಟೆ ಹಾಳಾದ ಅನುಭವ ಮಕ್ಕಳಿಗೆ ಆಗಿದೆ. ಶಾಲೆಗೆ ವಿತರಿಸುವ ಬೇಳೆಯಲ್ಲೂ ಕಸ ಪತ್ತೆಯಾಗಿದೆ. ಅಕ್ಕಿಯೂ ಕಳಪೆ ಗುಣಮಟ್ಟದ್ದು ಎಂದು ಪೋಷಕರು ಆರೋಪಿಸಿದ್ದಾರೆ.

ಒಟ್ಟಾರೆ ಸರ್ಕಾರಿ ಶಾಲೆಯ ಮಕ್ಕಳಿಯೆ ಕಳಪೆ ಗುಣಮಟ್ಟದ ಮೊಟ್ಟೆ, ಬೇಳೆ ಸಿಗುತ್ತಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಛೆತ್ತು ಕೊಳ್ಳಬೇಕಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.