Home Crime ಕುಂದಾಪುರ: ಸ್ಕೂಟರ್‌ನಿಂದ ಬಿದ್ದು ಕಾರ್ಮಿಕ ಮೃತ್ಯು…!!

ಕುಂದಾಪುರ: ಸ್ಕೂಟರ್‌ನಿಂದ ಬಿದ್ದು ಕಾರ್ಮಿಕ ಮೃತ್ಯು…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಉಮೇಶ್ ಪೂಜಾರಿ (58) ಸ್ಕೂಟರ್‌ನಿಂದ ಬಿದ್ದು ಮೃತಪಟ್ಟ ಘಟನೆ ಗುಲ್ವಾಡಿ ಶಾಲೆಯ ಬಳಿ ನಡೆದಿದೆ.

ಆಗಸ್ಟ್ 31ರಂದು ಸಂಜೆ ಸುಮಾರು 7:30ರ ವೇಳೆಗೆ ಉಮೇಶ್ ಪೂಜಾರಿ ಅವರು KA 20 EP 8001 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಸ್ಥಳೀಯರು ಅವರನ್ನು ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆಗೆ ತೆರಳಿದ ಪುತ್ರ ಮಧುಕರ ಅವರಿಗೆ, ರಾತ್ರಿ 8:10ರ ಸುಮಾರಿಗೆ ವೈದ್ಯರು ಉಮೇಶ್ ಪೂಜಾರಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಉಮೇಶ್ ಪೂಜಾರಿ ಅವರು ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.