Home Crime ಪಡುಬಿದ್ರಿ: ಪತ್ನಿಯನ್ನು ಉಚ್ಚಿಲದಲ್ಲಿ ಬಿಟ್ಟು ಹೋದ ಪತಿ ನಾಪತ್ತೆ…!!

ಪಡುಬಿದ್ರಿ: ಪತ್ನಿಯನ್ನು ಉಚ್ಚಿಲದಲ್ಲಿ ಬಿಟ್ಟು ಹೋದ ಪತಿ ನಾಪತ್ತೆ…!!

ಪಡುಬಿದ್ರಿ: ಎಲ್ಲೂರು ನಿವಾಸಿ ಯುವಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರು ಎಲ್ಲೂರು ಗ್ರಾಮದ ನಿವಾಸಿ ಹರ್ಷಲ್ ಅಮೀನ್ (32) ಎಂದು ತಿಳಿಯಲಾಗಿದೆ.

ದೂರು ನೀಡಿದವರು: ಪತ್ನಿ ಮಂಜುಳಾ (35), ಕುಂಜಿಬೆಟ್ಟು ಕ್ರೋಮ ಕಂಪನಿ ಉದ್ಯೋಗಿ. 5 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ಆ.27 ಬೆಳಿಗ್ಗೆ 7:50ಕ್ಕೆ ಮಂಜುಳಾ ಅವರನ್ನು ಉಚ್ಚಿಲ ಪೇಟೆಯಲ್ಲಿ ಕೆಲಸಕ್ಕೆ ಬಿಟ್ಟು ಹರ್ಷಲ್ ಮನೆಗೆ ವಾಪಸ್ ಹೋಗಿದ್ದರು. ಮಧ್ಯಾಹ್ನ ತಾಯಿ ರಾಜಶ್ರೀ ಅವರೊಂದಿಗೆ ಮುಂಬೈಗೆ ಮಾವನ ಮನೆಗೆ ಹೋಗುವುದಾಗಿ ಕರೆ ಮಾಡಿ ತಿಳಿಸಿದ್ದಾರೆ.

ಸೆ.2 ರಂದು ಮುಂಬೈಯಿಂದ ವಾಪಸ್ ಬಂದು ತಾಯಿಯನ್ನು ಉಡುಪಿ ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದಾರೆ. ಅದೇ ದಿನ ರಾತ್ರಿ 11:26ಕ್ಕೆ ಕಾಪುವಿನಲ್ಲಿ ಬಸ್ಸಿನಲ್ಲಿ ಹೋಗುತ್ತಿರುವುದಾಗಿ ಪತ್ನಿಗೆ ಕರೆ ಮತ್ತು ವಾಟ್ಸಾಪ್ ಮೆಸೇಜ್ ಮಾಡಿದ್ದಾರೆ.

ಆಗಸ್ಟ್ 27 ರಿಂದ ನೇರವಾಗಿ ಭೇಟಿಯಾಗಿಲ್ಲ. ಸೆ.2 ರ ರಾತ್ರಿ ಫೋನ್ ಕರೆ ಬಳಿಕ ಸಂಪರ್ಕ ಕಡಿತಗೊಂಡಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ.

ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆ ಅ.ಕ್ರ 101/2026 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.