Home Crime ಹೆಬ್ರಿ: ಕುಚ್ಚೂರು ರಸ್ತೆಗೆ ತಡೆ ಬೇಲಿ ಹಾಕಿದ ಪ್ರಕರಣ : ಸಾರ್ವಜನಿಕರ ಸಹಕಾರದಿಂದ ಬೇಲಿ ತೆರವು…!!

ಹೆಬ್ರಿ: ಕುಚ್ಚೂರು ರಸ್ತೆಗೆ ತಡೆ ಬೇಲಿ ಹಾಕಿದ ಪ್ರಕರಣ : ಸಾರ್ವಜನಿಕರ ಸಹಕಾರದಿಂದ ಬೇಲಿ ತೆರವು…!!

ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಿರುವ ರಘುರಾಮ್ ಶೆಟ್ಟಿ ಎಂಬ ವ್ಯಕ್ತಿ. ಹಲವು ವರ್ಷಗಳಿಂದ ಇದ್ದ ರಸ್ತೆಯನ್ನು ವೈಯಕ್ತಿಕ ದ್ವೇಷದಿಂದ ನಿನ್ನೆ ತಡರಾತ್ರಿ ಏಕಾಏಕಿ ರಸ್ತೆಯನ್ನು ತಂತಿ ಬೇಲಿ ಹಾಕಿ ಸಂಚಾರ ಬಂದು ಮಾಡಿದ್ದು. ಇದರಿಂದ ಕೆಳಗೆ ಇರುವ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಸಂಚಾರಕ್ಕೆ ತೊಡಕು ಉಂಟಾಗಿತ್ತು.

ಅಲ್ಲದೆ ರಘುರಾಮ್ ಶೆಟ್ಟಿ ಇವರ ಸಂಬಂಧಿಕರು ಅನಾರೋಗ್ಯದಿಂದ ಪೀಡಿತರಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ದಾರಿ ಇಲ್ಲದೆ ತೊಂದರೆ ಉಂಟಾಗಿತ್ತು. ಇದನ್ನು ತಿಳಿದ ಸ್ಥಳೀಯ ಮುಖಂಡರಾದ ಕಿರಣ ತೋಳಾರ್, ಅಶ್ವಿನಿ ತೋಳಾರ್, ನವೀನ್ ಕೆ ಅಡ್ಯಂತಾಯ, ರಘುರಾಮ್ ಕುಲಾಲ್, ದೇವಳಬೈಲು ಸುಧಾಕರ್ ಶೆಟ್ಟಿ, ಮಹೇಶ್ ಶೆಟ್ಟಿ ಬಾದ್ಲು, ಮಹೇಶ್ ಶೆಟ್ಟಿ ಜೆಡ್ಡು, ರೋಶನ್ ಕುಮಾರ್ ಶೆಟ್ಟಿ, ಸನತ್ ಶೆಟ್ಟಿ, ದಿನೇಶ್ ಶೆಟ್ಟಿ ಚಾರ ಹಾಗೂ ಮತ್ತಿತರರ ಸಹಕಾರದಲ್ಲಿ ಬೇಲಿಯನ್ನು ತೆರವುಗೊಳಿಸಿರು.

ಸ್ಥಳಕ್ಕೆ ಹೆಬ್ರಿ ಪೊಲೀಸರು ಆಗಮಿಸಿ ಶಾಂತಿ ಸುವ್ಯವಸ್ಥೆಗೆ ಕ್ರಮವಹಿಸಿದರು. ಹೆಬ್ರಿಯ ಖ್ಯಾತ ನ್ಯಾಯವಾದಿ ರತನ್ ಕುಮಾರ್ ಸ್ಥಳದಲ್ಲಿ ಉಪಸ್ಥಿತರಿದ್ದರು.