Home Crime ಮಲ್ಪೆ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಯುವಕ ನಾಪತ್ತೆ…!!

ಮಲ್ಪೆ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಯುವಕ ನಾಪತ್ತೆ…!!

ಉಡುಪಿ: ಕೊಡವೂರು ಗ್ರಾಮದ ಮೂಡುತೋಟ ನಿವಾಸಿ 34 ವರ್ಷದ ಶರತ್‌ ಎಂಬ ಯುವಕ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಶರತ್‌ ಅವರು ಸೆಪ್ಟೆಂಬರ್‌ 7ರಂದು ಬೆಳಿಗ್ಗೆ 8:30ರ ಸುಮಾರಿಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ಆದರೆ, ಕೆಲಸಕ್ಕೆ ತೆರಳಿದ ಬಳಿಕ ಈವರೆಗೂ ಮನೆಗೆ ವಾಪಸಾಗಿಲ್ಲ. ಅಲ್ಲದೆ, ಸಂಬಂಧಿಕರ ಮನೆಗೂ ತೆರಳಿಲ್ಲ ಎನ್ನಲಾಗಿದೆ.

ಯುವಕನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶರತ್‌ ಅವರ ಸಂಬಂಧಿ ನಿತೀಶ್‌ ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2026ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.

ಶರತ್‌ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.