Home Crime ಮಂಗಳೂರು: ಅಪರಾಧ ಪ್ರಕರಣದ ಆರೋಪಿ ಗಾಂಜಾ ಸೇವನೆ ಪತ್ತೆ…!!

ಮಂಗಳೂರು: ಅಪರಾಧ ಪ್ರಕರಣದ ಆರೋಪಿ ಗಾಂಜಾ ಸೇವನೆ ಪತ್ತೆ…!!

ಮಂಗಳೂರು: ನಗರ ಸಮೀಪದ ಸುರತ್ಕಲ್ ಠಾಣೆ ಮೊ.ನಂ. 74/2026 ಕಲಂ 118(1), 109, 352, 351(2), 351(3), 324(3), 3(5) BNS ಪ್ರಕರಣದ ಆರೋಪಿ ಮೊಹಮ್ಮದ್ ನಝೀರ್ (19) ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಪಿಎಸ್ಐ ಜನಾರ್ದನ ನಾಯಕ್ ಅವರು ಅ.19 ರಂದು ರಾತ್ರಿ 9:30ಕ್ಕೆ NITK ಬೀಚ್ ಕಡೆಯಿಂದ ಮುಕ್ಕ ಜಂಕ್ಷನ್ ಸಮೀಪ ಬರುತ್ತಿದ್ದಾಗ ಆರೋಪಿಯನ್ನು ಕಂಡು ವಿಚಾರಣೆ ನಡೆಸಿದ್ದಾರೆ. ಆತನ ಕಣ್ಣುಗಳು ನಶೆಯಲ್ಲಿದ್ದಂತೆ ಕಂಡು, ನಡವಳಿಕೆಯಲ್ಲಿ ಅನುಮಾನ ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಮಂಗಳೂರಿನ ಎ.ಜೆ ಆಸ್ಪತ್ರೆ ಕುಂಟಿಕಾನಕ್ಕೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

ವೈದ್ಯಾಧಿಕಾರಿ ನೀಡಿದ ವರದಿಯಲ್ಲಿ Tetrahydrocannabinol (Marijuana) ಪಾಸಿಟಿವ್ ಎಂದು ಬಂದಿದೆ.

ಆರೋಪಿ ಮಣಿಮೊಂಡ ಹೌಸ್, ಉಪ್ಪಳ ಗೇಟ್ ಬಳಿ, ಕಾಸರಗೋಡು ಜಿಲ್ಲೆಯ ನಿವಾಸಿ. ಈ ಬಗ್ಗೆ ಸುರತ್ಕಲ್ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.