Home Crime ಬೈಂದೂರು : ವ್ಯಕ್ತಿಯೊಬ್ಬರು ಆತ್ಮಹತ್ಯೆ…!!

ಬೈಂದೂರು : ವ್ಯಕ್ತಿಯೊಬ್ಬರು ಆತ್ಮಹತ್ಯೆ…!!

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತಪಟ್ಟವರು ಬಸವ ಎಂದು ತಿಳಿದು ಬಂದಿದೆ.

ಘಟನೆ ವಿವರ: ಪಿರ್ಯಾದಿದಾರರಾದ ಸಂಜೀವ (36), ಯಳಜಿತ ಗ್ರಾಮ ಬೈಂದೂರು ಇವರ ಅಣ್ಣ ಬಸವ (38) ರವರು ದಿನಾಂಕ 17/04/2025 ರಂದು ಕಾಣೆಯಾಗಿದ್ದು ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿರುತ್ತದೆ. ಪಿರ್ಯಾದಿದಾರರಿಗೆ ದಿನಾಂಕ 15/05/2025 ರಂದು ಯಳಜಿತ ಗ್ರಾಮದ ಗುರುವನಕೋಟೆಯ ಪಾರೆಸ್ಟ್‌ ಒಳಗೆ ಮರಕ್ಕೆ ಒಬ್ಬ ವ್ಯಕ್ತಿ ಕುತ್ತಿಗೆಗೆ ನೇಣು ಬಿಗಿದು ಮೃತ ಶರೀರ ಕೊಳೆತು ಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಾಹಿತಿ ಸಿಕ್ಕಿದ ಮೇರೆಗೆ ಬೆಳಗ್ಗೆ 10:45 ಗಂಟೆಗೆ ಹೋಗಿ ನೋಡಲಾಗಿ ಮೃತದೇಹವು ತಲೆಯಿಂದ ಪಾದದ ವರಗೆ ಪೂರ್ತಿ ಕೊಳೆತು ಎಲುಬು ಕಾಣುವ ಸ್ಥಿತಿಯಲ್ಲಿದ್ದು ಮೃತ ದೇಹದ ಮೈಮೇಲಿನ ಅಂಗಿ ಕುತ್ತಿಗೆಯಲ್ಲಿರುವ ದಾರ ಮತ್ತು ಪದಕ ಹಾಗೂ ಕಪ್ಪು ಬಣ್ಣದ ನೈಲಾನ ಚಡ್ಡಿಯನ್ನು ಪಿರ್ಯಾದಿದಾರರು ಮತ್ತು ಅವರ ತಾಯಿ ಪಾರ್ವತಿ ರವರು ಗುರುತ್ತಿಸಿದ್ದು ಮೃತದೇಹವು ಬಸವ ರವರ ಮೃತದೇಹವೆಂದು ಖಚಿತಪಡಿಸಿ ರುತ್ತಾರೆ. ಮೃತ ಬಸವ ಆತನ ಹೆಂಡತಿ ಪ್ರೇಮಾಳ ಸಂಸಾರದ ಜೀವನದಲ್ಲಿ ಭಿನ್ನಾಪ್ರಾಯ ಉಂಟಾಗಿ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.