ಉಡುಪಿ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಸಿಎಲ್-7 ಸನ್ನದುಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸನ್ನದನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿರುವ ಮಾಲ್ಗುಡಿ ಕಂಫರ್ಟ್ (ಓಝೂನ್ ಬಾರ್ ರೆಸ್ಟೋರೆಂಟ್) ಹಾಗೂ ಬ್ರಹ್ಮಾವರ ತಾಲೂಕು ಹೇರಾಡಿ ಗ್ರಾಮ ಧರ್ಮಸಾಲೆ ಎಂಬಲ್ಲಿರುವ ರಶ್ಮಿ ಬೋರ್ಡಿಂಗ್ ಲಾಡ್ಡಿಂಗ್ ಎಂಬ 2 ಸನ್ನದುಗಳನ್ನು ಐದು ದಿನಗಳ ಕಾಲ ಉಡುಪಿ ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ ಎಂದು ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.



