Home Crime ಅಮಾಸೆಬೈಲು: ವಾಕಿಂಗ್‌ಗೆ ತೆರಳಿದ್ದ 64 ವರ್ಷದ ವ್ಯಕ್ತಿ ನಾಪತ್ತೆ…!!

ಅಮಾಸೆಬೈಲು: ವಾಕಿಂಗ್‌ಗೆ ತೆರಳಿದ್ದ 64 ವರ್ಷದ ವ್ಯಕ್ತಿ ನಾಪತ್ತೆ…!!

ಅಮಾಸೆಬೈಲು: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ 64 ವರ್ಷದ ಸುರತ್ ಕುಮಾರ್ ಶೆಟ್ಟಿ ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸುಮಾರು ಒಂದು ವರ್ಷದಿಂದ ಪಾರ್ಶ್ವವಾಯು ಸಮಸ್ಯೆಯಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಸುರತ್ ಕುಮಾರ್ ಶೆಟ್ಟಿ, ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಬಳಿಕ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಶೇಡಿಮನೆ ಗ್ರಾಮದ ಅಗಳಿಬೈಲು ಅರಸಮ್ಮ ಕಾನು ಪ್ರದೇಶದಿಂದ ಅರಸಮ್ಮ ಕಾನು ಪೇಟೆಯವರೆಗೆ ವಾಕಿಂಗ್‌ಗೆ ತೆರಳುತ್ತಿದ್ದರು.

ಅದರಂತೆ ಆಗಸ್ಟ್ 29ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಎಂದಿನಂತೆ ಮನೆಯಿಂದ ವಾಕಿಂಗ್‌ಗೆ ತೆರಳಿದ ಅವರು, ಬಳಿಕ ಮನೆಗೆ ಮರಳಿಲ್ಲ. ಕುಟುಂಬಸ್ಥರು ಹಾಗೂ ಪರಿಚಯಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.

ಈ ಕುರಿತು ಅವರ ಸೋದರ ಮಾವ ಅನೀಶ್ ವಿ. ಶೆಟ್ಟಿ ನೀಡಿದ ದೂರಿನ ಮೇರೆಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2026, ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.