ಉಡುಪಿ: ತಾಲೂಕಿನ ತೋನ್ಸೆ ಪಂಚಾಯತ್’ನಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಒಮ್ಮೆ ಅಲ್ಪಾವಧಿಗೆ ಬೀಜಾಡಿ ಪಂಚಾಯತ್’ಗೆ ವರ್ಗಾವಣೆಗೊಂಡಿರುವುದನ್ನು ಹೊರತುಪಡಿಸಿ, ತೋನ್ಸೆ ಗ್ರಾಮ ಪಂಚಾಯತ್’ನ ಮೂಲಕ ಹಂತ ಹಂತವಾಗಿ ಮುಂಭಡ್ತಿ ಹೊಂದಿರುವ ದಿನಕರ ಬೇಂಗ್ರೆ ಅವರು ಕೆಲದಿನಗಳ ಹಿಂದೆಯಷ್ಟೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದಾರೆ.
ತೋನ್ಸೆ ಪಂಚಾಯತ್’ನಲ್ಲಿ ಬಿಲ್ ಕಲೆಕ್ಟರ್ & ಕಾರ್ಯದರ್ಶಿಯಾಗಿ ದುಡಿದಿರುವ ಅವರು ಆಗಸ್ಟ್ ತಿಂಗಳ ತಾರೀಖು 27ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗುಜ್ಜಾಡಿ ಪಂಚಾಯತ್’ಗೆ ಅಧಿಕೃತವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (PDO) ನಿಯುಕ್ತಿ ಆಗಿರುತ್ತಾರೆ.
ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ರಾಜ್ಯ ಮಟ್ಟದ ಸೌಹಾರ್ದ ಚಳುವಳಿಯ ಭಾಗವಾಗಿ ಸೇವೆ ಸಲ್ಲಿಸಿದ ಅವರದು ಬಹುಮುಖ ಪ್ರತಿಭೆ.




