Home Karavali Karnataka ಬಾವಿಗೆ ಬಿದ್ದ ಚಿರತೆ ಸಾವು…!!

ಬಾವಿಗೆ ಬಿದ್ದ ಚಿರತೆ ಸಾವು…!!

ಕಾರ್ಕಳ : ಚಿರತೆಯೊಂದು ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ಬೋಳ ಗ್ರಾಮದಲ್ಲಿ ನಡೆದಿದೆ.

ಜ.20ರ ತಡ ರಾತ್ರಿ ಮಲಕ್ಯರ್ ಕಡ್ಮನ್ ನಾರಾಯಣ್ ಶೆಟ್ರ ತೋಟದ ಬಾವಿಗೆ ಚಿರತೆ ಬಿದ್ದು ಸಾವಿಗೀಡಾಗಿದೆ.

ಬೆಳಿಗ್ಗೆ ಮನೆಯವರು ನೀರು ತೆಗೆಯಲು ಬಾವಿ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದ್ದು ತಕ್ಷಣವೇ ಸಮಾಜ ಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಅವರಿಗೆ ಮಾಹಿತಿ ನೀಡಿದ್ದಾರೆ.

ಅವರು ಅರಣ್ಯ ಇಲಾಖೆಗೆ ತಿಳಿಸಿದ್ದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯ ಮೃತದೇಹವನ್ನು ಮೇಲಕ್ಕೆತ್ತಿ ಅಂತಿಮ ಕ್ರಿಯೆಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡರು.