Home Crime ಮಾಜಿ ಶಾಸಕ ವಿ.ಎಸ್ ಪಾಟೀಲ್ ಡಬಲ್ ಬ್ಯಾರಲ್ ಬಂದೂಕು ಕಳ್ಳತನ…!!

ಮಾಜಿ ಶಾಸಕ ವಿ.ಎಸ್ ಪಾಟೀಲ್ ಡಬಲ್ ಬ್ಯಾರಲ್ ಬಂದೂಕು ಕಳ್ಳತನ…!!

ಕಾರವಾರ : ಯಲ್ಲಾಪುರದ ಮಾಜಿ ಶಾಸಕ ವಿ.ಎಸ್ ಪಾಟೀಲ್ ಅವರ ಡಬಲ್ ಬ್ಯಾರಲ್ ಬಂದೂಕು ಕಳ್ಳತನವಾಗಿದೆ.

ಪಾಟೀಲ್‌ ಅವರು ತಮ್ಮ ಆತ್ಮರಕ್ಷಣೆಗಾಗಿ ಈ ಬಂದೂಕನ್ನು ಇರಿಸಿಕೊಂಡಿದ್ದರು. ಬಂದೂಕು ಕಳ್ಳತನವಾಗಿ 15 ದಿನದ ನಂತರ ಮುಂಡಗೋಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯಲ್ಲಾಪುರ ಮಾಜಿ ಶಾಸಕ ವೀರಭದ್ರಗೌಡ ಶಿವನಗೌಡ ಪಾಟೀಲ್ (ವಿ.ಎಸ್.ಪಾಟೀಲ್) ಅವರು ತಮ್ಮ ಸ್ವರಕ್ಷಣೆಗಾಗಿ ಡಿ.ಬಿ,ಬಿ,ಎಲ್ ನಂ:-18845 ಸಂಖ್ಯೆಯ ಸುಮಾರು 40,000ರೂ. ಮೌಲ್ಯದ ಡಬಲ್ ಬ್ಯಾರಲ್ ಬಂದೂಕನ್ನು ಹೊಂದಿದ್ದರು. ಅದನ್ನು ಮುಂಡಗೋಡ ತಾಲೂಕಿನ ಅಂದಲಗಿ ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿರೋ ಬೋರಿನ ಮನೆಯಲ್ಲಿ ಇಟ್ಟಿದ್ದರು.

ಆದರೆ ಈ ಬಂದೂಕನ್ನು ಕಳೆದ ವರ್ಷ ಡಿಸೆಂಬರ್ 31 ರಂದು ಕಳ್ಳತನವಾಗಿದೆ. ಬೇರೆಲ್ಲೋ ಇಟ್ಟಿರಬಹುದು ಎಂದು ಸುಮ್ಮನಿದ್ದ ಮಾಜಿ ಶಾಸಕರು ಕೊನೆಗೆ ಬೇರೆಡೆ ಹುಡಕಿದಾಗಲೂ ದೊರೆತಿಲ್ಲ. ಈ ಕಾರಣ ಕಳ್ಳರು ಯಾರೋ ತಮ್ಮ ಡಬಲ್ ಬ್ಯಾರಲ್ ಬಂದೂಕು ಕಳ್ಳತನ ಮಾಡಿದ್ದನ್ನು ಅರಿತ ಅವರು ಕೊನೆಗೆ ಮುಂಡಗೋಡು ಠಾಣೆಯಲ್ಲಿ ದೂರು ನೀಡಿದ್ದಾರೆ.