ವಿವೇಕಾನಂದರ ಜೀವನ ಪಯಣವೂ ಯುವ ಸಮೂಹಕ್ಕೆ ಮಾದರಿ…
ಬೆಂಗಳೂರು: ಜ.13: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ವಿವೇಕಾನಂದ ಜಯಂತಿ ಹಾಗೂ ಪ್ರತಿ ವರ್ಷ ಆಚರಿಸುವಂತೆ ಎಂ.ಎಡ್ ಪ್ರಶಿಕ್ಸಣಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಸಿ. ಎರ್ರಿಸ್ವಾಮಿರವರು ವಿವೇಕಾನಂದರ ಬಾಲ್ಯ ಜೀವನವು ಅದ್ಭುತ ಯಶಸ್ವಿ ಬುದ್ದಿವಂತರಾಗಿದ್ದರು. ಇವರ ಆದರ್ಶಗಳು, ಪ್ರಸ್ತುತ ಯುವ ಪೀಳಿಗೆಗೆ ಪ್ರೇರಕ ಇಂದಿನ ಪ್ರತಿಯೊಬ್ಬರೂ ಗ್ರಂಥಾಲಯ ಭೇಟಿ ನೀಡುತ್ತಾ ವೈಯಕ್ತಿಕವಾಗಿ ಜ್ಞಾನವನ್ನು ದಿನಪತ್ರಿಕೆಗಳಿಂದ ವಿವಿಧ ಪುಸ್ತಕಗಳಿಂದ ಪಡೆಯಲು ಕಂಕಣ ಬದ್ಧರಾಬೇಕೆಂದು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಮಾತನಾಡಿದ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು ವಿವೇಕಾನಂದರ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಿರ್ವಹಿಸಿದ ಅವರ ಜೀವನ ಅನುಭವದ ಘಟನೆಗಳು ಪ್ರಸ್ತುತ ಪೀಳಿಗೆಗೆ ಮಾದರಿಯಾಗುತ್ತದೆ ಎಂದು ತಿಳಿಸಿದರು.
ಪ್ರಚಲಿತ ದಿನಗಳಲ್ಲಿ ವಿವೇಕಾನಂದರ ಜೀವನ ಪಯಣವೂ ಯುವ ಸಮೂಹಕ್ಕೆ ಮಾದರಿ, ಇಂದಿಗೂ ಕೂಡ ಅವರ ನಡೆ-ನುಡಿ, ಪ್ರಸಂಗಗಳ ಪ್ರೇರೇಪಿಸಲು ಪೂರಕವಾಗುತ್ತದೆ ಎಂದು ಹೇಳಿದರು.
ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಇದೊಂದು ಮುಂಬರುವ ಪ್ರಶಿಕ್ಷಾಣಾರ್ಥಿಗಳಿಗೆ ಮಾರ್ಗದರ್ಶನ, ಇಂತಹ ಕಾರ್ಯಕ್ರಮಗಳು ಹಿರಿಯ ವಿದ್ಯಾರ್ಥಿಗಳ ಸಲಹೆ-ಸೂಚನೆ ಮೇರೆಗೆ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗಸೂಚಿವಾಗಲಿದೆ ಎಂದರು.
ಶಿಕ್ಷಣ ವಿಭಾಗದಕ್ಕೆ ಪ್ರತಿಯೊಬ್ಬರೂ ಕೂಡ ಇಲ್ಲಿಗೆ ಬಂದ ಕ್ಷಣವೇ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಪ್ರಶಿಕ್ಷಾಣಾರ್ಥಿಗಳು ಪ್ರತಿನಿತ್ಯವೂ ಸಹ ಗ್ರಂಥಾಲಯ ಭೇಟಿ ನೀಡುವುದರಿಂದ ಅವರ ಅಧ್ಯಯನಕ್ಕೆ ಸಹಾಯ, ಸ್ವ ಅಧ್ಯಯನ ದೃಷ್ಟಿಯಿಂದ ಪ್ರಯೋಗಿಕ ಕಾರ್ಯಚಟುವಟಿಕೆಗಳಿಂದ ಮತ್ತಷ್ಟು ಜೀವನದಲ್ಲಿ ಮುಂದೆ ಬರಲು ಸಹಾಯವಾಗುತ್ತದೆಂದು ವಿಸ್ತೃತವಾಗಿ ಮಾಹಿತಿ ನೀಡಿದರು.
ಕೊನೆಯಲ್ಲಿ ಪ್ರಥಮ ವರ್ಷದ ಪ್ರಶಿಕ್ಷಾಣಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ, ನೃತ್ಯ, ಹಾಡು, ಮಿಮಿಕ್ರಿ, ಏಕಾಭಿನಯ, ವಿಭಿನ್ನ ಕಲೆಗಳ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಲ್ಲಿ ನಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು, ಪ್ರಾಧ್ಯಾಪಕರಾದ ಡಾ. ಎಂ.ಸಿ. ಎರ್ರಿಸ್ವಾಮಿ, ಸಿಬ್ಬಂದಿ ವರ್ಗದವರು, ಸಂಶೋಧನಾರ್ಥಿಗಳಾದ
ಜಲಜಾಕ್ಷಿ, ಕವಿತಾ ಕೆ.ಆರ್, ಶಶಿಕುಮಾರ್ ಬಿ, ಪ್ರಥಮ – ದ್ವಿತೀಯ ವರ್ಷದ ಪ್ರಶಿಕ್ಷಾಣಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ವಿಭಾಗದ ಅಧ್ಯಾಪಕರ ವೃಂದ, ಪ್ರಶಿಕ್ಷಾಣಾರ್ಥಿಗಳಿಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.




