ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಮೂಕ ಹಾಗೂ ಕಿವುಡ ಆಗಿದ್ದ ವ್ಯಕ್ತಿಯೋರ್ವರು ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಪ್ರೇಮನಾಥ ಪೈ ಎಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಪಿರ್ಯಾದುದಾರ ಶ್ರೀಮತಿ ನಂದಿನಿ ಪೈ ಪ್ರಾಯ 40 ವರ್ಷ ಗಂಡ: ಪ್ರೇಮನಾಥ ಪೈ ವಾಸ: ರಮಾನಾಥ ಕೃಪಾ , ಮುಂಡ್ಕೂರು ಗ್ರಾಮ, ಇವರ ಗಂಡ ಪ್ರೇಮನಾಥ ಪೈ ಪ್ರಾಯ 57 ವರ್ಷ ಎಂಬವರು ಮೂಕ ಹಾಗೂ ಕಿವುಡ ಆಗಿದ್ದು ಕೆಲವೊಂದು ಶಬ್ದವನ್ನು ಮಾತ್ರ ಮಾತನಾಡುತ್ತಿದ್ದು, ಅವರು ತಂದೆಯ ಪಾಲಿನ ಆಸ್ತಿಯಲ್ಲಿ ಪಾಲು ಸಿಗಲಿಲ್ಲ ಎಂಬ ವಿಚಾರದಲ್ಲಿ ಹಾಗೂ ಅವರ ಹೆಂಡತಿ ಬೇರೆ ಗಂಡಸರೊಂದಿಗೆ ಮಾತನಾಡುತ್ತಿದ್ದ ಬಗ್ಗೆ ಸಂಶಯ ಹೊಂದಿ ಅದೇ ವಿಚಾರದಲ್ಲಿ ಮಾನಸಿಕವಾಗಿ ಬೇಸರದಿಂದಿದ್ದು, ಅದೇ ವಿಚಾರದಲ್ಲಿ ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ: 06.01.2026 ರಂದು ಬೆಳಿಗ್ಗೆ 10:00 ಗಂಟೆಗೆ ತಾನು ವಾಸವಾಗಿರುವ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸಾಂತೂರುಕೊಪ್ಪಳ ಗ್ರಾಮದ ಮೀನಾಕ್ಷಿ ಎಂಬವರ ಬಾಡಿಗೆ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟವರನ್ನು ಅದೇ ದಿನ ಪಡುಬಿದ್ರೆ ಸಿದ್ದಿವಿನಾಯಕ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆಯಲ್ಲಿ ಇರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 12.01.2026 ರಂದು ಮುಂಜಾನೆ 3:26 ಗಂಟೆಗೆ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2026, ಕಲಂ:194 ಬಿಎನ್ಎಸ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.



