Home Crime ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಅಪವಾದಾತ್ಮಕ ಹೇಳಿಕೆ : ವಿಠಲ್ ಗೌಡಗೆ 30 ದಿನ...

ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಅಪವಾದಾತ್ಮಕ ಹೇಳಿಕೆ : ವಿಠಲ್ ಗೌಡಗೆ 30 ದಿನ ಕಾರಾಗೃಹ ಶಿಕ್ಷೆ….!!

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಮತ್ತು ಅದರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಅಪವಾದಾತ್ಮಕ ಹೇಳಿಕೆ ನೀಡಿದ್ದ ವಿಠಲ್ ಗೌಡಗೆ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 30 ದಿನ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಮತ್ತು ನಿರಂತರವಾಗಿ ಉಲ್ಲಂಘಿಸಿದ ಆರೋಪದ ಮೇಲೆ ಈ ಶಿಕ್ಷೆ ವಿಧಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಅದರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ಕುರಿತು ಅಪವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಅಥವಾ ಪ್ರಕಟಿಸಬಾರದು ಎಂಬಂತೆ ನ್ಯಾಯಾಲಯ ನೀಡಿದ್ದ ಸ್ಪಷ್ಟ ನಿಷೇಧಾಜ್ಞೆ (ಇಂಜಕ್ಷನ್ ಆದೇಶ) ಇದ್ದರೂ, ಆರೋಪಿತ ವಿಟ್ಟಲ್ ಗೌಡ ಅವರು ಅದನ್ನು ಉಲ್ಲಂಘಿಸಿ ಪುನಃಪುನಃ ಹೇಳಿಕೆಗಳನ್ನು ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ಈ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಹಿರಿಯ ವಕೀಲರಾದ ಎಸ್. ರಾಜಶೇಖರ್ ಹಿಲ್ಲಿಯಾರು ವಾದ ಮಂಡಿಸಿದ್ದಾರೆ