ಕೆಆರ್ ಪುರಂ: ಜ.01: ನಗರದ ದೇವಸಂದ್ರದ
ವಿದ್ಯಾ ವಿಜ್ಞಾನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಗಿ ಮತ್ತು ಅಂಚೆಚೀಟಿ ಮಹತ್ವ ಕಾರ್ಯಕ್ರಮ ನಡೆಯಿತು.
ಶಾಲಾ ಪ್ರಾಂಶುಪಾಲರಾದ ಜ್ಯೋತಿಯವರು ಮಾತನಾಡಿದ ಅವರು ರಾಗಿ ತಿಂದರೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ ರಾಗಿಯಲ್ಲಿ ನಾನಾ ರೀತಿಯ ತಿನಿಸುಗಳ ರಾಗಿ ಇಡ್ಲಿ, ರಾಗಿ ದೋಸೆ, ರಾಗಿ ಮುದ್ದೆ, ರಾಗಿ ಬಿಸ್ಕೆಟ್, ರಾಗಿ ಶಾವಿಗೆ, ಈ ತಿಂಡಿಗಳ ಪರಿಚಯವನ್ನು ಮಾಡಿಕೊಳ್ಳಲಾಗಿದೆ ಎಂದರು.
ಪ್ರಸ್ತುತ ದಿನದಲ್ಲಿ ಮಕ್ಕಳಿಗೆ ಅಂಚೆ ಚೀಟಿ, ನಾಣ್ಯಗಳ ಬಗ್ಗೆೆ ಜ್ಞಾನವನ್ನು ಹೆಚ್ಚಿಸುವುದು ಅದರ ಮಹತ್ವವನ್ನು ಹೆಚ್ಚಿಸಬೇಕಿದೆ. ಹಾಗೆ ಅಪರೂಪದ ನಾಣ್ಯ ಹಾಗೂ ಅಂಚೆ ಚೀಟಿ ಸಂಗ್ರಹಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್, ಸೇರಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಇತಿಹಾಸ ತಜ್ಞ, ಮುಳಬಾಗಿಲಿನ ಎಚ್.ಕೆ.ಸತೀಶ್ ಅವರ ಅಪರೂಪದ ನಾಣ್ಯ ಹಾಗೂ ಅಂಚೆ ಚೀಟಿಗಳನ್ನು ಪ್ರದರ್ಶನದಲ್ಲಿ ಕಂಡ ಶಾಲಾ ಮಕ್ಕಳು ಸಂತಸಪಟ್ಟರು.
ಪ್ರಸ್ತುತ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸಬೇಕು. ಕೌಟುಂಬಿಕ ಸಂಬಂಧಗಳ ಮಹತ್ವ ತಿಳಿಸಿಕೊಡಬೇಕು. ಮೊಬೈಲ್ ಹವ್ಯಾಸದಿಂದ ಹೆಚ್ಚಾಗಿ ಮಕ್ಕಳನ್ನು ದೂರವಿರಿಸಬೇಕು. ಅಂಚೆ ಚೀಟಿ, ಹಿಂದಿನ ಕಾಲದ ನಾಣ್ಯಗಳನ್ನು ಮಕ್ಕಳಿಗೆ ತೋರಿಸಬೇಕು. ಮಕ್ಕಳಿಗೆ ಪ್ರಾಚೀನ ಕಾಲದಲ್ಲಿ ಮಹತ್ವ ತಿಳಿಸಬೇಕು ಎಂದರು.
ಕೋಟ್: ನಮ್ಮ ಶಾಲೆಯಲ್ಲಿ ಗಣಿತ, ವಿಜ್ಞಾನ, ಕನ್ನಡ ಪ್ರತಿಭಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುತ್ತಿರೋದು ಹೆಮ್ಮೆಯ ವಿಷಯವಾಗಿದೆ.
ಜ್ಯೋತಿ, ಶಾಲಾ ಪ್ರಾಂಶುಪಾಲರು. ಇದೇ ಕಾರ್ಯಕ್ರಮದಲ್ಲಿ ವೈ.ಕೆ.ಹನುಮಂತರಾಜು, ವೈ.ಕೆ.ವಸ್ತಲ, ಎಂ.ಕೆ.ಸತೀಶ್, ನಾನಾ ಶಾಲೆಯ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು
- .



