ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ವ್ಯಕ್ತಿಯೋರ್ವ ಸಮೀಪ ವಿಪರೀತ ಕುಡಿತದ ಅಭ್ಯಾಸ ಇದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ದಿವಾಕರ ನಾಯ್ಕ ಎಂದು ತಿಳಿದು ಬಂದಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾಧ ಸುಶೀಲ ನಾಯ್ಕ (64) ಗಂಡ:ದಿ ನಾರಾಯಣ ನಾಯ್ಕ ವಾಸ: 2-46 ಮಲ್ಲಂಜೆಡೈ ಪಾಟ್ಲ ಹಿರೇಬೆಟ್ಟು ಗ್ರಾಮ ಉಡುಪಿ ಇವರ ಮಗ ದಿವಾಕರ ನಾಯ್ಕ (40) ರವರು ಇವರೊಂದಿಗೆ ವಾಸಮಾಡಿಕೊಂಡಿದ್ದು ಆತನು ಹಾಗೂ ಆತನ ಹೆಂಡತಿ ಶಕುಂತಲಾ ಯಾವಾಗಲೂ ಜಗಳ ಮಾಡುತ್ತಿದ್ದು 3 ವರ್ಷಗಳಿಂದ ಬೇರೆ ಬೇರೆಯಾಗಿ ವಾಸಮಾಡಿಕೊಂಡಿರುತ್ತಾರೆ ಹಾಗೂ ಆತನಿಗೆ ವಿಪರೀತ ಕುಡಿತದ ಚಟವಿದ್ದು ದಿನಾಂಕ 01/01/2025 ರಂದು ರಾತ್ರಿ 08:15 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮನೆಗೆ ಬಾರದೇ ಇದ್ದು ಪಿರ್ಯಾದಿದಾರರು ಹುಡುಕಿಕೊಂಡು ಹೋದಲ್ಲಿ ದಿನಾಂಕ 02/01/2025 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಅವರ ಮನೆಯಾದ ಉಡುಪಿ ತಾಲೂಕು ಹಿರೇಬೆಟ್ಟು ಗ್ರಾಮದ ಪಟ್ಲ ಮನೆಯ ಬದಿ ಇರುವ ಗೊಬ್ಬರದ ಮರದ ಗೆಲ್ಲುವಿನಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ. ದಿವಾಕರ ನಾಯ್ಕ ಈತನಿಗೆ ವಿಪರೀತ ಕುಡಿತದ ಅಭ್ಯಾಸ ಇದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿರಬಹುದಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2026 ಕಲಂ:194 ಬಿ.ಎನ್.ಎಸ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.



