Home Crime ಮರಳು ತುಂಬಿದ್ದ ಟಿಪ್ಪರ್ ಸ್ಕೂಟಿಗೆ ಢಿಕ್ಕಿ : ಸವಾರ ಮೃತ್ಯು…!!

ಮರಳು ತುಂಬಿದ್ದ ಟಿಪ್ಪರ್ ಸ್ಕೂಟಿಗೆ ಢಿಕ್ಕಿ : ಸವಾರ ಮೃತ್ಯು…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಅತೀ ವೇಗದಿಂದ‌ ಮರಳು ತುಂಬಿದ್ದ ಟಿಪ್ಪರ್ ಬಂದು ಸ್ಕೂಟಿಗೆ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟ ಸ್ಕೂಟಿ ಸವಾರ ಕೃಷ್ಣಮೂರ್ತಿ ಅಡಿಗ ಎಂದು ತಿಳಿಯಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 07/01/2026 ರಂದು ಬೆಳಿಗ್ಗೆ ಸ್ಕೂಟಿ ನಂಬ್ರ KA20 HS 4644 ನೇದರ ಸವಾರ ಕೃಷ್ಣಮೂರ್ತಿ ಅಡಿಗ ಪ್ರಾಯ: 58 ವರ್ಷ ರವರು ಸ್ಕೂಟಿ ಸವಾರಿ ಮಾಡಿಕೊಂಡು ರಾ.ಹೆ.66ರ ಕುಂದಾಪುರ –ಉಡುಪಿ ಏಕಮುಖ ರಸ್ತೆಯಲ್ಲಿ ಹಂಗಳೂರು ಜಂಕ್ಷನ್ ಕಡೆಯಿಂದ ಕೋಟೇಶ್ವರ ಕಡೆಗೆ ಹೊರಟು ಸಮಯ ಸುಮಾರು ಬೆಳಿಗ್ಗೆ 10-00 ಘಂಟೆಗೆ ಹಂಗಳೂರು ಗ್ರಾಮದ ಹಂಗಳೂರು ಜಂಕ್ಷನ್ ಹತ್ತಿರದ ಜನನಿ ಹೋಮ್ ಅಪ್ಲಾಯನ್ಸಸ್ ಎದುರು ತಲುಪುಷ್ಟರಲ್ಲಿ ಅದೇ ರಸ್ತೆಯಲ್ಲಿ ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಮರಳು ಲೋಡ್ ಇದ್ದ ಟಿಪ್ಪರ್ ಲಾರಿ ನಂಬ್ರ KA 20 C 6406 ನೇದನ್ನು ಅದರ ಚಾಲಕ ಶ್ರೇಯಾಂಶ ಯುವರಾಜ ಜೈನ್ ಎಂಬುವವನು ಟಿಪ್ಪರನ್ನು ಅತೀ ವೇಗ, ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟಿ ಸವಾರನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಕೂಟಿ ಸಮೇತ ರಸ್ತಗೆ ಬಿದ್ದು ಟಿಪ್ಪರ್ ಲಾರಿ ಆತನ ಮೇಲೆ ಹಾದು ಹೋದ ಪರಿಣಾಮ ಸ್ಕೂಟಿ ಸವಾರನ ತಲೆಗೆ ಹಾಗೂ ಎದೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ದೇಹದ ಅಲ್ಲಲ್ಲಿ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇರುವವರನ್ನು ಪಿರ್ಯಾದಿದಾರರು ಹಾಗೂ ಆದರ್ಶ ಎಂಬುವವರು ಸ್ಥಳೀಯರೊಂದಿಗೆ ಚಿಕಿತ್ಸೆಗೆ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದು ವೈಧ್ಯರು ಪರೀಕ್ಷಿಸಿ ಸ್ಕೂಟಿ ಸವಾರ ಕೃಷ್ಣಮೂರ್ತಿ ಅಡಿಗ ರವರು ಅದಾಗಲೇ ಮೃತಪಟ್ಟಿರುವುದಾಗಿ ಬೆಳಿಗ್ಗೆ 10-40 ಘಂಟೆಗೆ ದೃಢಪಡಿಸಿರುತ್ತಾರೆ.

ಈ ಬಗ್ಗೆ ಹೆಚ್.ಕೆ. ಚಂದ್ರಶೇಖರ ಹತ್ವಾರ್, ಪ್ರಾಯ:80 ತಂದೆ: ದಿ ಹೆಚ್. ಕೃಷ್ಣ ರಾವ್, ವಾಸ: ಕೃಷ್ಣ ಸದನ, ರಾ.ಹೆ.66 ರ ಹತ್ತಿರ, ಹಂಗಳೂರು ಗ್ರಾಮ ರವರು ದೂರು ನೀಡಿದ್ದು, ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 04/2026 ಕಲಂ 281, 106(1) BNS,ರಂತೆ ಪ್ರಕರಣ ದಾಖಲಾಗಿರುತ್ತದೆ.