Home Crime ಮಂಗಳೂರು : ಗಾಂಜಾ ಸೇವನೆ ಆರೋಪ : ಯುವಕ ಸೆರೆ…!!

ಮಂಗಳೂರು : ಗಾಂಜಾ ಸೇವನೆ ಆರೋಪ : ಯುವಕ ಸೆರೆ…!!

ಮಂಗಳೂರು: ನಗರದ ಬಾವುಟಗುಡ್ಡೆ ಬಳಿ ಗಾಂಜಾ ಸೇವನೆ ಮಾಡಿದ್ದ ಆರೋಪದಲ್ಲಿ ಕುಲಶೇಖರ ಸಿರ್ಲಪಡ್ಪು ನಿವಾಸಿ ಜೈಸನ್ ರಾಡ್ರಿಗಸ್ (20) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದಆತನ್ನು ಬಂದರು ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಸರಿಯಾಗಿ ಮಾತನಾಡದೆ ಬಾಯಿ ತೊದಲುತ್ತಿತ್ತು. ಮಾತ್ರವಲ್ಲದೆ ಬಾಯಿಯಿಂದ ಘಾಟು ವಾಸನೆ ಬಂದಿದ್ದು, ಮತ್ತಷ್ಟು ವಿಚಾರಿಸಿದಾಗ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್ ಡಿಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.