Home Crime ಬಂಟ್ವಾಳ: ಐಟಿಐ ವಿದ್ಯಾರ್ಥಿಗಳ ಮಧ್ಯೆ ಗಲಾಟೆ : ಇಬ್ಬರು ಸಹಪಾಠಿಗಳಿಗೆ ಚೂರಿ ಇರಿದ ವಿದ್ಯಾರ್ಥಿ…!!

ಬಂಟ್ವಾಳ: ಐಟಿಐ ವಿದ್ಯಾರ್ಥಿಗಳ ಮಧ್ಯೆ ಗಲಾಟೆ : ಇಬ್ಬರು ಸಹಪಾಠಿಗಳಿಗೆ ಚೂರಿ ಇರಿದ ವಿದ್ಯಾರ್ಥಿ…!!

ಮಂಗಳೂರು: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಇಬ್ಬರು ಸಹಪಾಠಿಗಳಿಗೆ ವಿದ್ಯಾರ್ಥಿಯೋರ್ವ ಪೆನ್ ಚಾಕುವಿನಿಂದ ಇರಿದ ಘಟನೆ. ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನೊಳಗಿನ ವಿಚಾರದಲ್ಲಿ ವಿದ್ಯಾರ್ಥಿ ಹೇಮಂತ್ ವಿದ್ಯಾರ್ಥಿಗೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ.

ಗಲಾಟೆ ತಪ್ಪಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿಗೂ ಗಾಯವಾಗಿದೆ. ಓರ್ವ ವಿದ್ಯಾರ್ಥಿಗೆ ಬೆನ್ನಿಗೆ ಗಾಯ ಹಾಗೂ ಇನ್ನೋರ್ವನಿಗೆ ತೊಡೆ ಭಾಗದಲ್ಲಿ ಗಾಯವಾಗಿದೆ. ಸದ್ಯ ಗಾಯಗೊಂಡ ಮಹಮ್ಮದ್ ರಿಯಾನ್ ಹಾಗೂ ಯಜೇಶ್ ಅವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದು‌ ಸಮುದಾಯ ಆಸ್ಪತ್ರೆ‌ ಬಳಿ‌‌‌ ಜನರು ಸೇರಿದ್ದು, ಪೊಲೀಸರು ಜನರನ್ನ ಚದುರಿಸಿದ್ದಾರೆ. ಬಂಟ್ವಾಳ ಡಿವೈಎಸ್ಪಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ವಿದ್ಯಾರ್ಥಿ ಹೇಮಂತ್ ನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.