Home Latest ಮಲ್ಪೆ : ಹಲವೆಡೆ ಚಿರತೆ ಓಡಾಟ…!!

ಮಲ್ಪೆ : ಹಲವೆಡೆ ಚಿರತೆ ಓಡಾಟ…!!

ಮಲ್ಪೆ : ಉಡುಪಿ ಜಿಲ್ಲೆಯ ಹಲವೆಡೆ ಚಿರತೆ ಓಡಾಟದ ಭೀತಿ ಎದುರಾಗಿದ್ದು, ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ವಿವಿಧ ಕಡೆಗಳಲ್ಲಿ ಬೋನ್ ಇರಿಸಿದೆ.

ಉಡುಪಿ ಜಿಲ್ಲೆಯ ತೆಂಕನಿಡಿಯೂರು, ಕೆಮ್ಮಣ್ಣು, ಹೂಡೆ ಸೇರಿದಂತೆ ಮೂಡುಬೆಳ್ಳೆ, ಹಿರಿಯಡ್ಕ, ಬಡನಿಡಿಯೂರು, ಪಾದೂರು ಭಾಗಗಳಲ್ಲೂ ರಾತ್ರಿ ವೇಳೆ ಚಿರತೆ ಸಂಚಾರ ಕಂಡು ಬಂದಿದೆ.

ಹೀಗಾಗಿ ಆ ಭಾಗದ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅಲ್ಲಲ್ಲಿ ಬೋನ್ ಇಡಲಾಗಿದೆ.