Home Crime ಅಕ್ರಮ ಮರಳು ಸಾಗಾಟ : ಇಬ್ಬರು ವಶಕ್ಕೆ…!!

ಅಕ್ರಮ ಮರಳು ಸಾಗಾಟ : ಇಬ್ಬರು ವಶಕ್ಕೆ…!!

ಕಾರ್ಕಳ : ಉಡುಪಿ ಜಿಲ್ಲೆಯ ‌ಕಾರ್ಕಳ ಸಮೀಪ ಟಿಪ್ಪರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ಟಿಪ್ಪರ್ ಸಹಿತ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಸಮ್ಯೇಗ್ದ್‌ ಜೈನ್ ಹಾಗೂ ವಿನ್ಸೆಂಟ್ ಪ್ರಕಾಶ ಡಿ’ ಆಲ್ಮೇಡಾ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ : ದಿನಾಂಕ 05.01.2026.ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಚೆರ್ಕಾಡಿ ಇರ್ಮುಗೋಡು ಎಂಬಲ್ಲಿ ವಿನ್ಸೆಂಟ್ ಪ್ರಕಾಶ ಡಿ’ ಆಲ್ಮೇಡಾ ಎಂಬುವರು ಹರಿಯುತ್ತಿರುವ ಸರಕಾರಿ ಹೊಳೆಯಿಂದ ಅಕ್ರಮವಾಗಿ ಕಳವು ಮಾಡಿ ದಾಸ್ತಾನು ಇರಿಸಿದ ಮರಳನ್ನು KA19 AE9401ನೇ ನಂಬ್ರದ ಟಿಪ್ಪರ ಲಾರಿಯಲ್ಲಿ ಮಾಲೀಕ ಮಹಮ್ಮದ್‌ ಇರ್ಫಾನ್‌ ಈತನು ತಿಳಿಸಿದಂತೆ ಟಿಪ್ಪರ ಲಾರಿಯ ಚಾಲಕ ಸಮ್ಯೇಗ್ದ್‌ ಜೈನ್(25) ತಂದೆ.ಜಗದೀಶ ವಾಸ.ಭಾರತಿ ನಿವಾಸ, ದಿಡಿಂಬಿರಿ, ಮುಡಾರು ಗ್ರಾಮ, ಕಾರ್ಕಳ ತಾಲೂಕು ಈತನು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕಾಬೆಟ್ಟು ಅತ್ತೂರು ಚರ್ಚ್‌ ದ್ವಾರದ ಬಳಿ ಬಂಗ್ಲೆಗುಡ್ಡೆ ಕಡೆಯಿಂದ ಪುಲ್ಕೇರಿ ಕಡೆಗೆ ಸಾಗಾಟ ಮಾಡುತ್ತಿರುವಾಗ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಯವರು ಸುಮಾರು 3 ಯುನಿಟ್ ಮರಳು ತುಂಬಿಸಿದ ಟಿಪ್ಪರ ಲಾರಿಯನ್ನು ವಶಕ್ಕೆ ಪಡೆದುಕೊಂಡು ಲಾರಿ ಚಾಲಕ ಸಮ್ಯೇಗ್ದ್‌ ಜೈನ್ ಹಾಗೂ ಅಕ್ರಮವಾಗಿ ಮರಳು ದಾಸ್ತಾನು ಇರಿಸಿ ಟಿಪ್ಪರ ಲಾರಿಗೆ ಮರಳು ತುಂಬಿಸಿದ ವಿನ್ಸೆಂಟ್ ಪ್ರಕಾಶ ಡಿ’ ಆಲ್ಮೇಡಾ(54), ತಂದೆ, ಸಲಂಧರ ಡಿ,. ಆಲ್ಮೇಡಾ ವಾಸ. ಎಗ್ರಿಕಲ್ಷರ್ ಸೊಸೈಟಿ ಬಳಿ ಪೇತ್ರಿ ಚೇರ್ಕಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.