ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಈಶ್ವರ ನಗರದ ನಗರ ಸಭೆಯ ಕುಡಿಯುವ ನೀರಿನಪಂಪ್ ಹೌಸಿಗೆ ನುಗ್ಗಿದ ಆಟೋ ಮಣಿಪಾಲ ಇಲ್ಲಿನ ಈಶ್ವರ ನಗರದ ಇಳಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ(169 A)ಯ ಲ್ಲಿ ಆಟೋ ಚಾಲಕನ ನಿಯಂತ್ರಣ ತಪ್ಪಿ ನಗರಸಭೆ ಕುಡಿಯುವ ನೀರಿನ ಪಂಪ್ ಹೌಸಿನ ಒಳಗೆ ಮಗುಚಿ ಬಿದ್ದ ಘಟನೆ ನಡೆದಿದೆ.
ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಇಲ್ಲಿ ರಸ್ತೆ ಏಕಾಏಕಿ ತಿರುವು ಇರುದರಿಂದ ರಿಕ್ಷಾ ಚಾಲಕರು ಕೂಡ ಪಲ್ಟಿ ಬೀಳುವ ಪರಿಸ್ಥಿತಿ ಉದ್ಭವಿಸುತ್ತದೆ. ಪದೇ ಪದೇ ಈ ಭಾಗದಲ್ಲಿ ಅಪಘಾತವಾಗ ಕಾರಣ. ತಿರುವು ಮು ರುವು ರಸ್ತೆಯೇ . ಕಾರಣವಾಗಿರುತ್ತದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ, ಸೂಚನಾ ಫಲಕವು ಉಪಯೋಗಕ್ಕೆ ಬರುವುದಿಲ್ಲ, ಏಕೆಂದರೆ ಇದು ಇಳಿಜಾರು ಪ್ರದೇಶ. ಮತ್ತು ಒಮ್ಮೆಲೆ ತಿರುವಿರುವುದರಿಂದ. ಹೆಚ್ಚಿನ ವಾಹನ ಚಾಲಕರು ಇಲ್ಲಿ ದಿಕ್ಕು ತಪ್ಪುತ್ತಾರೆ.
ಉಡುಪಿಯಿಂದ ಹಿರಿಯಡ್ಕದ ಕಡೆಗೆ ಬಾಡಿಗೆಗೆ ತೆರಳುತ್ತಿದ್ದ ಆಟೋ ಈಶ್ವರನಗರದ ಇಳಿಜಾರಿನಲ್ಲಿ ಏಕಾಏಕಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಪಂಪ್‌ಹೌಸ್‌ಗೆ ನುಗ್ಗಿದೆ. ಆಟೋದಲ್ಲಿದ್ದ ಮಹಿಳೆಗೆ ಗಾಯವಾಗಿದ್ದು, ಮಗು ಅಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.
ಗಾಯಾಳು ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಪೆರಂಪಳ್ಳಿಯವರು ಎಂದು ತಿಳಿದುಬಂದಿದೆ.
ಈಶ್ವರನಗರದ ಈ ಭಾಗದಲ್ಲಿ ರಸ್ತೆ ಏಕಾಏಕಿ ತಿರುವು ಪಡೆದುಕೊಳ್ಳುವುದರ ಜೊತೆಗೆ ಇಳಿಜಾರು ಇರುವುದರಿಂದ ವಾಹನ ಚಾಲಕರು ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಸ್ಥಳದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ವಿನ್ಯಾಸವೇ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ತಿರುವಿನ ಮುನ್ನೆಚ್ಚರಿಕೆ ಸೂಚನಾ ಫಲಕ ಅಳವಡಿಸಿದರೂ ಇಳಿಜಾರು ಹಾಗೂ ಏಕಾಏಕಿ ಬರುವ ತಿರುವಿನಿಂದಾಗಿ ವಾಹನ ಚಾಲಕರಿಗೆ ಸಮರ್ಪಕವಾಗಿ ರಸ್ತೆ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಪಘಾತ ತಡೆಗಟ್ಟಲು ರಸ್ತೆಯ ವಿನ್ಯಾಸದಲ್ಲಿ ಅಗತ್ಯ ಬದಲಾವಣೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ರಿಕ್ಷಾ ಎದುರು ಬ್ರಹ್ಮ ಬೈದರ್ಕಳ ಎಂದು ಬರೆಯಲಾಗಿದೆ. ಈ ಆಟೋದ ಎದುರುಗಡೆ ಹೂವಿನ ಹಾರ ಹಾಕಿದ್ದು ಕಂಡುಬಂದಿದೆ ಮಣಿಪಾಲದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





