Home Crime ಸ್ವಸಹಾಯ ಸಂಘಗಳ ಒಕ್ಕೂಟದ ಹಣ ದುರುಪಯೋಗ : ಪ್ರಕರಣ ದಾಖಲು…!!

ಸ್ವಸಹಾಯ ಸಂಘಗಳ ಒಕ್ಕೂಟದ ಹಣ ದುರುಪಯೋಗ : ಪ್ರಕರಣ ದಾಖಲು…!!

ಕುಂದಾಪುರ : ಕೋಟದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟದ ಹಣ ದುರುಪಯೋಗ ಪ್ರಕರಣ ಬೆಳಕಿಗೆ ಬಂದಿದೆ.

ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಅಶ್ವಿನಿ (33) ಎಂಬವರು 2022ರಿಂದ ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮುಖ್ಯ ಬರಹಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಒಕ್ಕೂಟದಲ್ಲಿ 54 ಸ್ವಸಹಾಯ ಸಂಘಗಳಿದ್ದು, 2022ರಿಂದ ಸರ್ಕಾರದಿಂದ ಒಟ್ಟು ₹52.50 ಲಕ್ಷ ಅನುದಾನ ಬಂದಿದೆ.
ದೂರಿನ ಪ್ರಕಾರ, ವಿವಿಧ ಸ್ವಸಹಾಯ ಸಂಘಗಳಿಗೆ ಹಂಚಿಕೆ ಮಾಡಬೇಕಿದ್ದ ಹಣವನ್ನು ಹಂಚಿಕೆ ಮಾಡದೆ, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳ ಸಹಿ ಮತ್ತು ಸೀಲುಗಳನ್ನು ನಕಲಿ ಮಾಡಿ, ಕೆಲವು ಸದಸ್ಯರ ಹೆಸರಲ್ಲಿಯೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಟ್ಟು ₹33.50 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಯಶೋಧ (53) ಅವರು ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 318(4), 316(2), 340(2) ಹಾಗೂ 3(5) ಅಡಿಯಲ್ಲಿ ತನಿಖೆ ಮುಂದುವರಿದಿದೆ.