Home Crime ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ…!!

ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ…!!

ಕೋಟ: ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ಹೆಸರಿನಲ್ಲಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ವ್ಯಕ್ತಿ ಐಶ್ಚರ್ಯ ಎಂದು ತಿಳಿದು ಬಂದಿದೆ.

ಜು.27ರಂದು ಐಶ್ಚರ್ಯ ಎಂಬವರ ಕ್ರೆಡಿಟ್ ಕಾರ್ಡ್‌ನ್ನು ಅಪ್‌ಡೇಟ್ ಮಾಡುವಂತೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಿಳಿಸಿದ್ದು ಅವರು ಗೂಗಲ್‌ನಲ್ಲಿ ಕಳುಹಿಸಿದ ಲಿಂಕ್‌ಗೆ ಕ್ಲಿಕ್ ಮಾಡಿದಾಗ ಐಶ್ವರ್ಯ ಅವರ ಕ್ರೆಡಿಟ್ ಕಾರ್ಡ್ ನಲ್ಲಿರುವ 1,99,696ರೂ. ಹಣ ಕಡಿತಗೊಂಡಿರುವುದಾಗಿ ದೂರಲಾಗಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.