Home Latest ಜಿಲ್ಲೆಯಲ್ಲಿ ಶೇ. 92.83 ಗಣತಿ ನಮೂನೆ ಡಿಜಿಟಲಿಕರಣ: ಜಿಲ್ಲಾಧಿಕಾರಿ..!!

ಜಿಲ್ಲೆಯಲ್ಲಿ ಶೇ. 92.83 ಗಣತಿ ನಮೂನೆ ಡಿಜಿಟಲಿಕರಣ: ಜಿಲ್ಲಾಧಿಕಾರಿ..!!

ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಒಟ್ಟು 10,63,876 ಮತದಾರರಲ್ಲಿ ಒಟ್ಟು 9,87,587 ಗಣತಿ ನಮೂನೆಯನ್ನು ಡಿಜಿಟಲೀಕರಣಗೊಳಿಸಿ ಶೇ. 92.83 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 1112 ಮತಗಟ್ಟೆಗಳಿದ್ದು, 733 ಮತಗಟ್ಟೆಗಳಲ್ಲಿ ಶೇ. 100ರಷ್ಟು ಡಿಜಿಟಲಿಕರಣ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಇವುಗಳಲ್ಲಿ 562 ಮತಗಟ್ಟೆಗಳಲ್ಲಿ ವೆರಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. 171 ಮತಗಟ್ಟೆಗಳಲ್ಲಿ ಅಲ್ಪ ಪ್ರಮಾಣದ ವೆರಿಫಿಕೇಷನ್ ಬಾಕಿ ಇದೆ. ಇದು ತ್ವರಿತಗತಿಯಲ್ಲಿ ಆಗಬೇಕಿದೆ ಎಂದರು.

ಜಿಲ್ಲೆಯಲ್ಲಿ 19,840 ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಕಂಡುಬಂದಿರುತ್ತದೆ.

24,679 ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 7521 ಮತದಾರರು ದಾಖಲಾತಿ ಮಾಡಿದ್ದಾರೆ ಎಂದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಯಾರೊಬ್ಬ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಇದಕ್ಕೆ ರಾಜಕೀಯ ಪಕ್ಷಗಳು, ಬಿ. ಎಲ್. ಓ ಮತ್ತು ಬಿ. ಎಲ್. ಎಗಳು ಕೈಜೋಡಿಸುವುದರೊಂದಿಗೆ ಪೂರ್ಣ ಪ್ರಮಾಣದಲ್ಲಿ ಮತದಾರರ ಕರಡು ಪಟ್ಟಿ ತಯಾರಿಸಲು ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಕೆ. ಗೋಪಾಲ ಪೂಜಾರಿ, ಹಬೀಬ್ ಅಲಿ, ಅಶೋಕ್,ಬಿ ವಿಜಯ, ಚಂದ್ರ ಶೇಖರ ಪ್ರಭು, ಶ್ರೀಕಾಂತ್ ನಾಯಕ್, ಜಯರಾಮ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.