ಮಣಿಪಾಲ : ಮಾಧವಕೃಪಾ ಶಾಲೆಯ ಸನಿಹ ಶಾಲಾ ವಿದ್ಯಾರ್ಥಿಗಳಿಗೆ ಕಿರುಕಳ ನೀಡುತ್ತಿದ್ದ, ಅಪರಿಚಿತ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಪೋಲಿಸರ ಸಹಕಾರದಿಂದ ವಶಕ್ಕೆ ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ನಡೆದಿದೆ.
ಕಾರ್ಯಚರಣೆಯಲ್ಲಿ ಮಣಿಪಾಲ ಪೋಲಿಸ್ ಠಾಣೆಯ ಎ. ಎಸ್. ಐ ಗಳಾದ ವಾಮನ, ಗಣೇಶ್ ಡಿ, ಭಾಗಿಯಾಗಿದ್ದರು. ಮುಕಂದಕೃಪಾ ಶಾಲೆಯ ಪ್ರವೀಣ್ ಕಾಮತ್ ಸಹಕರಿಸಿದ್ದರು.




