ಮಂಗಳೂರು : ಕಸ್ಟಡಿಯಲ್ಲಿದ್ದ ಕೈದಿಗೆ ಇನ್ನೋರ್ವ ಕೈದಿ ಸಿಮ್ ಕಾರ್ಡ್ ಗಳನ್ನು ನೀಡಲು ಯತ್ನಿಸಿದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು23ರಂದು ಕೊಣಾಜೆ ಪೊಲೀಸರು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳನ್ನು ಮಂಗಳೂರು ಜಿಲ್ಲಾ ಕಾರಾಗೃಹದಿಂದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಕಾರಾಗೃಹಕ್ಕೆ ಕರೆದುಕೊಂಡು ಹೋಗಲು ಸಿದ್ಧರಾಗಿದ್ದಾಗ ಮಧ್ಯಾಹ್ನ ಕೈದಿ ಹಸನಬ್ಬ ಆಲಿಯಾಸ್ ಅಚ್ಚು ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಮೊಹಮ್ಮದ್ ರಿಜ್ವಾನ್ ಗೆ ರಹಸ್ಯವಾಗಿ 2 ಸಿಮ್ ಕಾರ್ಡ್ ಗಳನ್ನು ನೀಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಅದನ್ನು ಕಾನ್‌ಸ್ಟೆಬಲ್ ತಡೆದಿದ್ದಾರೆ




