Home Crime ಹಿರಿಯ ನಾಗರಿಕರೊಬ್ಬರಿಗೆ ಸೈಬರ್ ವಂಚನೆ : 5,11,882 ರೂ. ಪಂಗನಾಮ..!!

ಹಿರಿಯ ನಾಗರಿಕರೊಬ್ಬರಿಗೆ ಸೈಬರ್ ವಂಚನೆ : 5,11,882 ರೂ. ಪಂಗನಾಮ..!!

ಉಡುಪಿ: ನಗರದಲ್ಲಿ ಆನ್‌ಲೈನ್‌ ಹೆಸರಿನಲ್ಲಿ ಮತ್ತೊಂದು ಭಾರೀ ಸೈಬರ್‌ ವಂಚನೆ ಬೆಳಕಿಗೆ ಬಂದಿದೆ.

ಕಡಿಯಾಳಿ ನಿವಾಸಿ 66 ವರ್ಷದ ಉಸ್ಮಾನ್‌ ಸಾಹೇಬ್‌ ಅವರು Friendship Club ಸದಸ್ಯತ್ವ ಪಡೆಯುವ ಉದ್ದೇಶದಿಂದ ಹಂತ ಹಂತವಾಗಿ ಗೂಗಲ್‌ ಪೇ, ಕ್ಯೂಆರ್‌ ಸ್ಕ್ಯಾನರ್‌ ಹಾಗೂ ಬ್ಯಾಂಕ್‌ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಿದ್ದರು.

ಜೂನ್‌ 27ರಿಂದ ಜುಲೈ 14ರವರೆಗೆ ಒಟ್ಟು 5,11,882 ರೂ. ಹಣವನ್ನು ಕಳುಹಿಸಿದ ಬಳಿಕ ಸೈಬರ್‌ ವಂಚಕರ ಬಲೆಗೆ ಬಿದ್ದಿರುವುದು ಅವರಿಗೆ ತಿಳಿದುಬಂದಿದೆ.

ಈ ಕುರಿತು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.