ಕಾರ್ಕಳ : ರಾಜಕೀಯ ವೈಷಮ್ಯದಿಂದ ಸಿ.ಎಂ ಸಿದ್ದರಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ರಾಜಕೀಯ ಪಕ್ಷದ ಮುಖಂಡರ ಹಾಗೂ ಹಿಂದುಗಳಿಗೆ ನೆಮ್ಮದಿ ಎಂದು ಪ್ರಚೋದಿಸಿ ವೈರತ್ವವನ್ನು ಬೆಳಸಿ ದ್ಷೇಷ ಭಾವನೆ ಹರಡುವ ಉದ್ದೇಶದಿಂದ Share ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
sampussalin (sampu s SANOOR) ಎಂಬ Instagram ಖಾತೆಯಲ್ಲಿ ಮೇ.2 ರಂದು ರಾಜಕೀಯ ವೈಷಮ್ಯದಿಂದ ಈ ಪೋಸ್ಟ್ ಹಂಚಿ ಸಾಮಾಜಿಕ ಜಾಲತಾಣ ದಲ್ಲಿ ಶೇರ್ ಮಾಡಲಾಗಿದೆ.
ಈ ಬಗ್ಗೆ ಸೂರಜ್ ಕುಕ್ಕುಂದೂರು, ಕಾರ್ಕಳರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 68/2025 ಕಲಂ. 353(2) BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ನಂತರದ ತನಿಖೆಯಲ್ಲಿ ಆರೋಪಿ ಬೆಂಗಳೂರಿನ ಹೋಂ ಗಾರ್ಡ್ ಕಚೇರಿಯಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಸಂಪತ್ ಸಾಲಿಯಾನ್ ನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಮಾನ್ಯ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.